ರಾಷ್ಟ್ರೀಯ

ಆಪರೇಶನ್‌ ಬ್ಲೂ ಸ್ಟಾರ್‌ 34ನೇ ವರ್ಷಾಚರಣೆ: ಸ್ವರ್ಣ ಮಂದಿರಕ್ಕೆ ಮುನ್ನೆಚ್ಚರಿಕೆಯ ಭದ್ರತಾ ಕ್ರಮ

Pinterest LinkedIn Tumblr


ಅಮೃತ್‌ಸರ: ಆಪರೇಶನ್‌ ಬ್ಲೂ ಸ್ಟಾರ್‌ 34ನೇ ವರ್ಷಾಚರಣೆಯ ಪ್ರಯುಕ್ತ ಮುನ್ನೆಚ್ಚರಿಕೆಯ ಭದ್ರತಾ ಕ್ರಮವಾಗಿ ಇಂದು ನಸುಕಿನಿಂದಲೇ ಸಿಕ್ಖರ ಪವಿತ್ರ ದೇವಾಲಯವಾಗಿರುವ ಇಲ್ಲಿನ ಸ್ವರ್ಣ ಮಂದಿರಕ್ಕೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸ್ಥಳೀಯ ಪೊಲೀಸ್‌ ಮತ್ತು ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಸಿಬಂದಿಗಳನ್ನು ಸ್ವರ್ಣ ಮಂದಿರದ ಸುತ್ತಮುತ್ತ ಮತ್ತು ಆಯಕಟ್ಟಿನ ಎಲ್ಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಸ್ವರ್ಣ ಮಂದಿರದೆಡೆಗೆ ಸಾಗಿ ಬರುವ ಎಲ್ಲ ವಾಹನಗಳನ್ನು ಪೊಲೀಸರು ತಪಾಸಿಸುತ್ತಿದ್ದಾರೆ.

ಸ್ವರ್ಣ ಮಂದಿರಲ್ಲಿ ಅಡಗಿಕೊಂಡಿದ್ದ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ಸಹಿತ ಖಾಲಿಸ್ಥಾನ ಬಂಡುಕೋರರನ್ನು ಹೊರ ಹಾಕಲು 1984ರ ಜೂನ್‌ 1 ಮತ್ತು ಜೂನ್‌ 8ರಂದು ಭಾರತೀಯ ಸೇನಾ ಪಡೆಯನ್ನು ಬಳಸಿಕೊಂಡು ಆಪರೇಶನ್‌ ಬ್ಲೂಸ್ಟಾರ್‌ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.

Comments are closed.