ರಾಷ್ಟ್ರೀಯ

ಬಾರ್‌ವೊಂದರಲ್ಲಿ ಗಲಾಟೆ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು

Pinterest LinkedIn Tumblr


ತ್ರಿಶೂರ್‌: ಬಾರ್‌ವೊಂದರಲ್ಲಿ ಜಗಳವಾಡಿಕೊಂಡು ನಂತರ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ತ್ರಿಶೂರ್‌ನ ಚೆಳ್ಳಕ್ಕರದಲ್ಲಿ ಪ್ರಜೀಶ್‌ ಮತ್ತು ಇತರ ಮೂವರು ಭಾನುವಾರ ರಾತ್ರಿ ಜಗಳವಾಡಿಕೊಂಡಿದ್ದರು.

ಆ ಸಂದರ್ಭದಲ್ಲಿ ಪೊಲೀಸರು ಆಗಮಿಸಿದ್ದು, ಅವರನ್ನು ಕಂಡು ನಾಲ್ವರು ಕೂಡ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಸಂದರ್ಭ ಪ್ರಜೀಶ್‌ನನ್ನು ಪೊಲೀಸರು ಹಿಂಬಾಲಿಸಿದ್ದಾರೆ. ಪ್ರಜೀಶ್ ಗೋಡೆ ಹಾರಿ ಓಡಿದ್ದಾನೆ. ನಂತರ ಪೊಲೀಸರು ಅಲ್ಲಿಂದ ತೆರಳಿದ್ದಾರೆ. ಪ್ರಜೀಶ್ ಪರಾರಿಯಾದ ಸ್ಥಳದಲ್ಲಿ ಆತನ ಗೆಳೆಯರು ಹುಡುಕಾಟ ನಡೆಸಿದ್ದಾರೆ, ಆದರೂ ಅವರಿಗೆ ಪ್ರಜೀಶ್ ಸುಳಿವು ಲಭಿಸಿರಲಿಲ್ಲ.

ಸೋಮವಾರ ಪ್ರಜೀಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸಿದ್ದು, ಬಾರ್ ಸಮೀಪದ ಬಾವಿಯೊಂದರಲ್ಲಿ ಪ್ರಜೀಶ್ ಶವ ಪತ್ತೆಯಾಗಿದೆ.

Comments are closed.