ರಾಷ್ಟ್ರೀಯ

ಹೆಂಡತಿಯ ತಂಗಿಯ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ

Pinterest LinkedIn Tumblr


ಹೊಸದಿಲ್ಲಿ : ಪತ್ನಿಯ ಸಹೋದರಿಗೆ ಬೆದರಿಕೆ ಹಾಕಿ, ಅತ್ಯಾಚಾರ ಗೈದ ವ್ಯಕ್ತಿಗೆ ದಿಲ್ಲಿ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಆರೋಪಿಯ ವಿರುದ್ಧ ಆತನ ಕಿರುಕುಳದ ಮತ್ತು ಜೀವ ಬೆದರಿಕೆ ಒಡ್ಡಿದ ಕೃತ್ಯಕ್ಕಾಗಿ ನಾಲ್ಕು ಎಫ್ಐಆರ್‌ಗಳು ದಾಖಲಾಗಿದ್ದರೂ ಆತ ಸರಿದಾರಿಗೆ ಬಾರದಿದ್ದುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿತು. 2015ರಲ್ಲಿ ತನ್ನ ಮದುವೆಯಾದಂದಿನಿಂದಲೂ ಪತ್ನಿಯ ಸಹೋದರಿಯ ಬೆನ್ನಿಗೆ ಬಿದ್ದಿದ್ದ ಆತ ಆಕೆಯನ್ನು ಲೈಂಗಿಕವಾಗಿ ಪೀಡಿಸುತ್ತಿದ್ದ ಎಂಬ ಪ್ರಾಸಿಕ್ಯೂಶನ್‌ ವಾದವನ್ನು ಕೋರ್ಟ್‌ ಪುರಸ್ಕರಿಸಿತು.

ಅಂತೆಯೇ ಅತ್ಯಾಚಾರ ಆರೋಪಿಗೆ ಕೋರ್ಟ್‌ 10 ವರ್ಷಗಳ ಜೈಲು ಶಿಕ್ಷೆ ಮಾತ್ರವಲ್ಲದೆ 15,000 ರೂ. ದಂಡವನ್ನೂ ವಿಧಿಸಿತು.

Comments are closed.