ರಾಷ್ಟ್ರೀಯ

ಏಕಾಂಗಿಯಾಗಿ ಬಿಜೆಪಿಯನ್ನು ನಮ್ಮ ಪಕ್ಷ ಎದುರಿಸಲಾಗದು; ಕಾಂಗ್ರೆಸ್ ನಾಯಕ ಆ್ಯಂಟನಿ

Pinterest LinkedIn Tumblr


ತಿರುವನಂತಪುರಂ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಕೇರಳದ ಮಾಜಿ ಸಿಎಂ ಎ. ಕೆ. ಆ್ಯಂಟನಿ ಹೇಳಿದ್ದಾರೆ.

ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಆದರೆ ಕಾಂಗ್ರೆಸ್ ಇತರ ಪಕ್ಷಗಳ ಜತೆ ಸೇರಿಕೊಂಡು, ಮೈತ್ರಿಕೂಟ ರಚಿಸಿ ಬಿಜೆಪಿ ವಿರುದ್ಧ ಹೋರಾಡಬೇಕಾಗುತ್ತದೆ. ಕರ್ನಾಟಕದಲ್ಲಿ ನಡೆದ ರಾಜಕೀಯ ಬೆಳವಣಿಗೆ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿಕೂಟ ರಚನೆ ಅಗತ್ಯವಾಗಿದ್ದು, ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದಿರುವ ಆ್ಯಂಟನಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನೆಹರೂ ಕಾಲದಲ್ಲಿ ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳನ್ನು ಬದಲಾಯಿಸಿದೆ. ಯೋಜನೆಗಳ ಹೆಸರನ್ನು ಕೂಡ ಬದಲಿಸಿ ಮತ್ತೆ ಜಾರಿ ಮಾಡಿದೆ. ಅಲ್ಲದೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.

Comments are closed.