ರಾಷ್ಟ್ರೀಯ

ಆರು ತಿಂಗಳ ಗರ್ಭಿಣಿ ಮೇಲೆ ಆಟೋ ಚಾಲಕ, ಅವನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ಗುರುಗ್ರಾಮ: ಆರು ತಿಂಗಳ ಗರ್ಭಿಣಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಆಟೋ ಚಾಲಕ ಹಾಗೂ ಅವನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದ್ವಿಚಕ್ರ ವಾಹನದಲ್ಲಿ ತನ್ನ ಪತಿಯೊಂದಿಗೆ ರೆಗ್ಯುಲರ್ ಚೆಕ್​ ಅಪ್​ಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಪರೀಕ್ಷೆ ನಂತರ ಮನೆಗೆ ವಾಪಸಾಗುತ್ತಿದ್ದಾಗ ಬೈಕ್​ನಲ್ಲಿ ನನಗೆ ಕೂರಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಹೇಳುತ್ತಾಳೆ. ಆಗ ಪತಿ ತಮ್ಮ ಊರು ಹತ್ತಿರದಲ್ಲೇ ಇರುವ ಕಾರಣ ಆಟೋದಲ್ಲಿ ಬರುವಂತೆ ಸೂಚಿಸಿದ್ದಾನೆ. ಅಂದು ಪತ್ನಿ ತುಂಬಾ ತಡವಾಗಿ ಬಂದಿರುವುದನ್ನು ನಮ್ಮ ಬಳಿ ಹೇಳಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ತಾನು ಆಟೋ ಹತ್ತಿದಾಗ ಆಟೋ ಚಾಲಕ ನನಗೆ ನೀರು ಕುಡಿಯುತ್ತೀರಾ ಎಂದು ಕೇಳಿದ. ನಾನು ನೀರು ಕುಡಿದ ನಂತರ ಪ್ರಜ್ಞೆ ಕಳೆದು ಕೊಂಡೆ. ಆಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ದಾಖಲಿಸಿದ್ದಾಳೆ. ಘಟನೆ ನಡೆದ ನಾಲ್ಕು ದಿನಗಳ ನಂತರ ದಂಪತಿ ನಮಗೆ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮನೆಸರ್​ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಮಹಿಳೆಯ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ.

Comments are closed.