ರಾಷ್ಟ್ರೀಯ

ರಾಜಸ್ಥಾನದ ಐಎಎಸ್‌ ಅಧಿಕಾರಿಗಳು ಮೋದಿಯವರು ಮಾಡಿದ ಭಾಷಣಗಳನ್ನು ಓದವುದು ಕಡ್ಡಾಯ!

Pinterest LinkedIn Tumblr


ಜೈಪುರ: ರಾಜಸ್ಥಾನದಲ್ಲಿರುವ ಐಎಎಸ್‌ ಅಧಿಕಾರಿಗಳು ಇನ್ನು ಮುಂದೆ ‘ಉತ್ತಮ ಆಡಳಿತ’ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣಗಳನ್ನು ಓದುವುದು ಕಡ್ಡಾಯವಾಗಿದೆ. ಈ ಸಂಬಂಧ, ಗುಜರಾತ್‌ ಸರಕಾರ ಈಗಾಗಲೇ ‘ಚಿಂತನ್‌ ಶಿವಿರ್‌’ ಎಂಬ ಶೀರ್ಷಿಕೆಯ ಪುಸ್ತಕಗಳನ್ನು ರಾಜಸ್ಥಾನಕ್ಕೆ ಕಳುಹಿಸಿದ್ದು, ಅವುಗಳನ್ನು ಐಎಎಸ್‌ ಅಧಿಕಾರಿಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ.

”ರಾಜಸ್ಥಾನದಲ್ಲಿರುವ ಐಎಎಸ್‌ ಅಧಿಕಾರಿಗಳು ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2001ರಿಂದ 2014) ‘ಉತ್ತಮ ಆಡಳಿತ’, ‘ತೀರ್ಮಾನ ತೆಗದುಕೊಳ್ಳುವಿಕೆ’, ‘ಸಮಯ ನಿರ್ವಹಣೆ’ ಮತ್ತಿತರ ವಿಷಯಗಳ ಕುರಿತು ಮಾಡಿದ ಭಾಷಣಗಳನ್ನೊಳಗೊಂಡ ಪುಸ್ತಕಗಳನ್ನು ಓದಬೇಕಾಗುತ್ತದೆ. ಶೀಘ್ರದಲ್ಲೇ ಆ ಪುಸ್ತಕಗಳನ್ನು ಅಧಿಕಾರಿಗಳಿಗೆ ವಿತರಿಸಲಾಗುವುದು,” ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ಪತ್ರಕರ್ತರಿಗೆ ತಿಳಿಸಿದರು.

”ಐಎಎಸ್‌ ಅಧಿಕಾರಿಗಳಿಗೆ ಪುಸ್ತಕ ವಿತರಿಸಲು ಅನುಮತಿ ಗಿಟ್ಟಿಸುವುದಕ್ಕಾಗಿ ಈಗಾಗಲೇ ಫೈಲ್‌ ರವಾನೆಯಾಗಿದೆ,” ಎಂದು ಗುಜರಾತ್‌ ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Comments are closed.