ರಾಷ್ಟ್ರೀಯ

ಗ್ರಾಮ ಸ್ವರಾಜ್‌ ಅಭಿಯಾನದಡಿಯಲ್ಲಿ 21 ದಿನಗಳಲ್ಲಿ 5 ಲಕ್ಷ ಮನೆಗಳನ್ನು ಬೆಳಗಿಸಿದ್ದೇವೆ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಗ್ರಾಮ ಸ್ವರಾಜ್‌ ಅಭಿಯಾನವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಟ್ವಿಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನದ ಗೌರವಾರ್ಥವಾಗಿ 16,850 ಹಳ್ಳಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸಲು ಏಪ್ರಿಲ್‌ 14ರಿಂದ ಮೇ 5ರವರೆಗೆ ಗ್ರಾಮ ಸ್ವರಾಜ್‌ ಅಭಿಯಾನ ನಡೆಸಲಾಗಿತ್ತು.

21 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಜನಸಾಮಾನ್ಯರಿಗೆ ದಕ್ಕಿರುವ ಸರ್ಕಾರಿ ಸೇವೆಗಳ ಅಂಕಿ–ಅಂಶಗಳನ್ನು ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

5,02,434
ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾದ ಮನೆಗಳ ಸಂಖ್ಯೆ

25.03 ಲಕ್ಷ
ವಿತರಿಸಲಾದ ಎಲ್‌ಇಡಿ ಬಲ್ಬ್‌ಗಳು

1,64,398
ಇಂದ್ರಧನುಷ್‌ ಯೋಜನೆಯಡಿ ರೋಗನಿರೋಧಕ ಲಸಿಕೆ ಹಾಕಲಾದ ಮಕ್ಕಳ ಸಂಖ್ಯೆ

20,53,599
ಜನ್‌ ಧನ್‌ ಯೋಜನೆಗೆ ಸೇರ್ಪಡೆಗೊಂಡ ಫಲಾನುಭವಿಗಳು

16,14,388
ಪ್ರಧಾನ್‌ ಮಂತ್ರಿ ಜೀವನ್‌ ಜ್ಯೋತಿ ವಿಮಾ ಪಾಲಿಸಿ ಪಡೆದವರ ಸಂಖ್ಯೆ

26,10,506
ಪ್ರಧಾನ್‌ ಮಂತ್ರಿ ಸುರಕ್ಷಾ ವಿಮಾ ಪಾಲಿಸಿ ಪಡೆದವರ ಸಂಖ್ಯೆ

**
ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ಬಡವರ ಮನೆಬಾಗಿಲಿಗೆ ತಲುಪಿಸಿ, ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಈ ಅಭಿಯಾನ ಉತ್ತಮ ಉದಾಹರಣೆಯಾಗಿದೆ.
–ನರೇಂದ್ರ ಮೋದಿ

Comments are closed.