ರಾಷ್ಟ್ರೀಯ

ನವದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಯ ಪಕ್ಕದಲ್ಲಿ ಕೂತು ಹಸ್ತಮೈಥುನ ಮಾಡಿದ ರಷ್ಯಾ ಪ್ರಜೆ ! ಮುಂದೇನಾಯಿತು ನೋಡಿ…

Pinterest LinkedIn Tumblr

ನವದೆಹಲಿ: ಇಸ್ತಾನ್‌ಬುಲ್‌ನಿಂದ ನವದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ರಷ್ಯಾ ಪ್ರಜೆಯೊರ್ವ ಹಸ್ತ ಮೈಥುನ ಮಾಡಿಕೊಂಡಿದ್ದು ಈ ಸಂಬಂಧ ಆತನನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಆರೋಪಿ ವ್ಯಕ್ತಿಯ ಪಕ್ಕದಲ್ಲಿ ಭಾರತೀಯ ಮಹಿಳೆಯೊರ್ವರು ಕುಳಿತಿದ್ದರು. ಈ ವೇಳೆ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲಿಗೆ ಬಂದ ವಿಮಾನ ಸಿಬ್ಬಂದಿ ಆತನನ್ನು ಅಲ್ಲಿಂದ ಬೇರೆ ಸೀಟಿಗೆ ಕಳುಹಿಸಿದ್ದಾರೆ.

ಟರ್ಕಿಶ್ ಏರ್ ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆಸಿದ್ದು ವಿಮಾನ ದೆಹಲಿಯಲ್ಲಿ ಇಳಿಯುವುದಕ್ಕೂ ಮುನ್ನ ಭದ್ರತಾ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ವಿಮಾನ ಇಳಿಯುತ್ತಿದ್ದಂತೆ ಅಲ್ಲಿಗೆ ದಾವಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಆತನನ್ನು ಬಂಧಿಸಿ ದೆಹಲಿಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.