ರಾಷ್ಟ್ರೀಯ

ವಿಚ್ಛೇದನ ಬಳಿಕವೂ ಪತಿ ದೌರ್ಜನ್ಯ ಎಸಗಲು ಯತ್ನಿಸಿದರೆ ದೂರು ಸಲ್ಲಿಸಲು ಅವಕಾಶ

Pinterest LinkedIn Tumblr


ನವದೆಹಲಿ: ವಿಚ್ಛೇದನ ಬಳಿಕವೂ ಪತಿ ದೌರ್ಜನ್ಯ ಎಸಗಲು ಯತ್ನಿಸಿದರೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಂತ್ರಸ್ತ ಮಹಿಳೆ ವೈವಾಹಿಕ ಬಾಂಧವ್ಯ ಹೊಂದಿಲ್ಲದೆ ಇದ್ದರೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪರಿಹಾರ ಪಡೆಯಲು ಯಾವುದೇ ಅಡ್ಡಿ ಇಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ನೀಡಿತ್ತು. ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿ ರಂಜನ್ ಗೊಗೊಯ್, ಆರ್. ಬಾನುಮತಿ ಹಾಗೂ ನವೀನ್‌ ಸಿನ್ಹಾ ನೇತೃತ್ವದ ನ್ಯಾಯಪೀಠ ನಿರಾಕರಿಸಿದೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪರಿಹಾರ ಪಡೆಯಲು, ಸಂತ್ರಸ್ತ ವ್ಯಕ್ತಿ ವೈವಾಹಿಕ ಬಾಂಧವ್ಯ ಅಥವಾ ಕೌಟುಂಬಿಕ ಸಂಬಂಧ ಹೊಂದಿರುವುದು ಕಡ್ಡಾಯವಲ್ಲ ಎಂದು ಈ ಪ್ರಕರಣದಲ್ಲಿ ಹೈಕೋರ್ಟ್ 2013ರಲ್ಲಿ ತೀರ್ಪು ನೀಡಿತ್ತು.

ವಿಚ್ಛೇದನ ಬಳಿಕವೂ ಪತ್ನಿಯನ್ನು ಸಂಪರ್ಕಿಸಿ ದೌರ್ಜನ್ಯ ಎಸಗಲು ಯತ್ನಿಸಿದರೆ ಅಥವಾ ಪತ್ನಿಯ ಉದ್ಯೋಗ ಸ್ಥಳದಲ್ಲಿ ಗಲಾಟೆ ಮಾಡಲು ಮುಂದಾದರೆ, ಈ ಕಾಯ್ದೆ ಅಡಿಯಲ್ಲಿ ಪತ್ನಿ ರಕ್ಷಣೆ ಕೋರಬಹುದು ಎಂದು ಹೈಕೋರ್ಟ್ ಹೇಳಿತ್ತು.

Comments are closed.