ರಾಷ್ಟ್ರೀಯ

ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ಪ್ರತಾಪ್‌ ಯಾದವ್‌ ಮದುವೆಯಲ್ಲಿ ಊಟಕ್ಕಾಗಿ ನೂಕು ನುಗ್ಗಲು!

Pinterest LinkedIn Tumblr


ಪಾಟ್ನಾ: ಬಿಹಾರ ಮಾಜಿ ಸಿಎಂ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ಪ್ರತಾಪ್‌ ಯಾದವ್‌ ಅವರ ವಿವಾಹಮಹೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ಆದರೆ ಅಲ್ಲಿ ನೆರೆದಿದ್ದ ಲಾಲು ಅಭಿಮಾನಿಗಳು ಅಶಿಸ್ತು ಪ್ರದರ್ಶಿಸಿ ಊಟಕ್ಕಾಗಿ ತಳ್ಳಾಟ, ನೂಕಾಟ ನಡೆಸಿದ್ದಾರೆ.

ಐಶ್ವರ್ಯಾರನ್ನು ಬಾಳಸಂಗಾತಿಯಾಗಿ ತೇಜ್‌ ಕೈಹಿಡಿದರು. ಈ ಸಂಭ್ರಮಕ್ಕೆ ರಾಜಕಾರಣಿಗಳು ಸೇರಿ ಗಣ್ಯಾತೀಗಣ್ಯರು ಸಾಕ್ಷಿಯಾಗಿದ್ದರು. ವಿವಿಐಪಿಗಳು,ಆಪ್ತರು ಮತ್ತು ಮಾಧ್ಯಮದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿ ನೆರೆದಿದ್ದ ಲಾಲು ಅಭಿಮಾನಿಗಳು ಮದುವೆಯಾಗುತ್ತಿದ್ದಂತೆ ವಿವಿಪಿ ಪೆಂಡಾಲ್‌ನತ್ತ ನುಗ್ಗಿ ಊಟಕ್ಕಾಗಿ ಮುಗಿಬಿದ್ದು ಅಶಿಸ್ತು ಮೆರೆದು ಪ್ರಾಣಿಗಳಂತೆ ವರ್ತಿಸಿ ಸಮಾರಂಭಕ್ಕೆ ಕೆಟ್ಟ ಹೆಸರು ತಂದಿದ್ದಾರೆ.

ಸಮಾರಂಭದಲ್ಲಿದ್ದ ಹಲವು ರಾಜಕಾರಣಿಗಳು ಜನರನ್ನು ಚದುರಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವರು ಭಕ್ಷ,ಭೋಜ್ಯಗಳ ಪಾತ್ರೆಯನ್ನೇ ಹೊತ್ತೊಯ್ದರು.

ಇಷ್ಟೆಲ್ಲಾ ಆಗಲು ಕಾರಣವೆಂದರೆ ಯಾರೋ ಸಮಾರಂಭದಲ್ಲಿ ನಿಮಗೆಲ್ಲಾ ಸಾಮಾನ್ಯ ಊಟ ಆದರೆ ವಿವಿಪಿಗಳಿಗೆ ಭರ್ಜರಿ ಊಟ ಇದೆ ಎಂದು ಕಿವಿಯೂದಿದ್ದೇ ಕಾರಣವಂತೆ .

ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹಾಜರಿದ್ದರು.

ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡಬೇಕಾಗಿ ಬಂತು.

Comments are closed.