ರಾಷ್ಟ್ರೀಯ

ಔರಂಗಾಬಾದ್‌: ಧಾರ್ಮಿಕ ಸ್ಥಳದ ಅಕ್ರಮ ನೀರಿನ ಸಂಪರ್ಕ ಕಡಿತ; ಕೋಮು ದಳ್ಳುರಿಗೆ 2 ಬಲಿ

Pinterest LinkedIn Tumblr


ಔರಂಗಾಬಾದ್‌ : ಧಾರ್ಮಿಕ ಸ್ಥಳವೊಂದರ ಅಕ್ರಮ ನೀರಿನ ಸಂಪರ್ಕವನ್ನು ಕಡಿದು ಹಾಕಿದುದನ್ನು ಅನುಸರಿಸಿ ನಿನ್ನೆ ಶುಕ್ರವಾರ ತಡ ರಾತ್ರಿ ಸ್ಫೋಟಗೊಂಡಿದ್ದ ಕೋಮು ದಳ್ಳುರಿಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ; ಐವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ; ಒಂದು ಡಜನ್‌ ಪೊಲೀಸರು ಗಾಯಗೊಂಡಿದ್ದಾರೆ.

ಇಂದು ಮಧ್ಯಾಹ್ನದ ಹೊತ್ತಿಗೆ ನಗರದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತಾದರೂ ಜಿಲ್ಲಾ ಆಡಳಿತೆ ಸೆ.144 ಹೇರಿದೆ; ಇಂಟರ್‌ನೆಟ್‌ ಸೇವೆಯನ್ನು ಅಮಾನತುಗೊಳಿಸಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರು ಮೃತರಲ್ಲಿ ಒಬ್ಟಾತ 17ರ ಹರೆಯದ ಯುವಕನಾಗಿದ್ದು ಆತನು ಪೊಲೀಸ್‌ ಫೈರಿಂಗ್‌ನಲ್ಲಿ ಅಸುನೀಗಿದನೆಂದು ವರದಿಯಾಗಿದೆ.

ಇನ್ನೋರ್ವ ಮೃತ ವ್ಯಕ್ತಿಯು 65 ವರ್ಷ ಪ್ರಾಯದವರಾಗಿದ್ದು, ಗಲಭೆಕೋರರು ಅಂಗಡಿಗಳಿಗೆ ಹಚ್ಚಿದ ಬೆಂಕಿ ತನ್ನ ಮನೆಗೂ ತಗಲಿದಾಗ ಆತ ಸುಟ್ಟು ಕರಕಲಾದ ಎಂದು ವರದಿ ತಿಳಿಸಿದೆ.

Comments are closed.