ರಾಷ್ಟ್ರೀಯ

ಪ್ರಧಾನಿಯಿಂದ ನಮೋ ಆ್ಯಪ್‌ ಮೂಲಕ ರಾಜ್ಯದ 25 ಲಕ್ಷ ಜನರೊಂದಿಗೆ ಮಾತುಕತೆ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಮೋ ಆ್ಯಪ್‌ ಮೂಲಕ ಕರ್ನಾಟಕದಲ್ಲಿ 25 ಲಕ್ಷ ಜನರ ಜತೆ ಮಾತನಾಡಿದ್ದಾರೆ.

ಈ ಮೂಲಕ ವಿಶೇಷವಾದ ರೀತಿಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರ ಜತೆ ನಿಕಟ ಸಂಪರ್ಕ ಸಾಧಿಸಿದ ಜಗತ್ತಿನ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬಹಿರಂಗ ಪ್ರಚಾರದ ಜತೆಗೆ ಆ್ಯಪ್‌ ಮೂಲಕವೂ ಪಕ್ಷದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಕೊಳೆಗೇರಿ ವಿಭಾಗದ ನಾಯಕ, ಕಾರ್ಯಕರ್ತರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.

ಒಟ್ಟು 25 ಲಕ್ಷ ಮಂದಿಯಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು,ನಾಯಕರು ಸೇರಿದ್ದಾರೆ ಎಂದರು ಮಾಳವೀಯ. ಆ್ಯಪ್‌ ಮೂಲಕ ಸಂಭಾಷಣೆ ನಡೆಸುವುದು ರಾಜಕೀಯ ಕ್ಷೇತ್ರದಲ್ಲಿ ವಿಶೇಷದ್ದಾಗಿದೆ ಎಂದೂ ಅವರು ಹೇಳಿದ್ದಾರೆ.

Comments are closed.