ರಾಷ್ಟ್ರೀಯ

ಮಗನ ಮದುವೆಗೆ ಪೆರೋಲ್‌ ಮೇಲೆ ಬಂದ ಲಾಲು: ಮಾಧ್ಯಮದೊಂದಿಗೆ ಮಾತನಾಡುವಂತಿಲ್ಲ ಎಂಬ ನಿರ್ಬಂಧ

Pinterest LinkedIn Tumblr


ಪಟ್ನಾ : ತನ್ನ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಮದುವೆಗೆ ಮೂರು ದಿನಗಳ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಎಲ್ಲ ಚಲನವಲನಗಳನ್ನು ಈ ಮೂರು ದಿನಗಳಲ್ಲಿ ವಿಡಿಯೋದಲ್ಲಿ ದಾಖಲಿಸಲಾಗುವುದೆಂದು ಜೈಲಿನ ಐಜಿಪಿ ಹರ್ಷ್‌ ಮಂಗಳ ಅವರು ತಿಳಿಸಿದ್ದಾರೆ. ಅಂತೆಯೇ ಈ ಮೂರು ದಿನಗಳ ಅವಧಿಯಲ್ಲಿ ಲಾಲು ಮಾಧ್ಯಮದೊಂದಿಗೆ ಮಾತನಾಡುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿದೆ.

ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್‌ ರಾಯ್‌ ಅವರ ಮೊಮ್ಮಗಳು ಐಶ್ವರ್ಯಾ ರಾಯ್‌ ಜತೆಗೆ ಲಾಲು ಹಿರಿಯ ಪುತ್ರನ ಮದುವೆ ಇದೇ ಮೇ 12ರಂದು ನಡೆಯಲಿದೆ.

ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳಲು, ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಲಾಲುಗೆ ಮೂರು ದಿನಗಳ ಪೆರೋಲ್‌ ಸಿಕ್ಕಿದೆ. ಅಂತೆಯೇ ಇಂದು ಗುರುವಾರ ಸಂಜೆ ಲಾಲು ಅವರು ರಾಂಚಿಯಿಂದ ವಿಮಾನ ಮೂಲಕ ಬಿಹಾರ ರಾಜಧಾನಿ ಪಟ್ನಾಗೆ ಪ್ರಯಾಣ ಬೆಳೆಸಲಿದ್ದಾರೆ.

ಈ ನಡುವೆ ರಾಂಚಿಯಿಂದ ಒಂದು ಪೊಲೀಸ್‌ ತಂಡವನ್ನು ಈಗಾಗಲೇ ಪಟ್ನಾಕ್ಕೆ ಕಳುಹಿಸಲಾಗಿದೆ ಎದು ಜೈಲಿನ ಐಜಿಪಿ ಹೇಳಿದರು.

Comments are closed.