ರಾಷ್ಟ್ರೀಯ

ಮಲ್ಯ ಆಸ್ತಿ ವಶಪಡಿಸಿಕೊಳ್ಳಲು ಅನುಮತಿ ನೀಡಿದ ಲಂಡನ್‌ ಕೋರ್ಟ್‌

Pinterest LinkedIn Tumblr

ಹೊಸದಿಲ್ಲಿ: ಬಹುಸಾವಿರ ಕೋಟಿ ರೂ. ಸಾಲ ವಂಚನೆ ಹಗರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿರುವ ಆಸ್ತಿಯನ್ನು ವಶಪಡಿಸಿಕೊಳ್ಳಲು ಲಂಡನ್‌ನ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ. ಇದರಿಂದ ಸಾಲ ವಸೂಲಿ ಮತ್ತು ಗಡಿಪಾರಿನ ಭೀತಿ ಎದುರಿಸುತ್ತಿರುವ ವಿಜಯ್ ಮಲ್ಯಗೆ ಹಿನ್ನಡೆ ಉಂಟಾಗಿದೆ.

ಐಡಿಬಿಐ ಬ್ಯಾಂಕ್ ಲಿ. ಮತ್ತು ಭಾರತೀಯ ಬ್ಯಾಂಕ್ ಒಕ್ಕೂಟ ಮಲ್ಯ ವಿರುದ್ಧ ಲಂಡನ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಸೊತ್ತು ವಶ ಮತ್ತು ಹರಾಜಿಗೆ ಅನುಮತಿ ಕೇಳಿವೆ. ಅದರಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಆ್ಯಂಡ್ರೂ ಹೆನ್‌ಶಾ, ಮಲ್ಯ ಆಸ್ತಿ ವಶದ ಕುರಿತು ಭಾರತೀಯ ಕೋರ್ಟ್‌ ಮತ್ತು ಅರ್ಜಿದಾರರು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅನುಮತಿ ನೀಡಿದ್ದಾರೆ.

ಅಲ್ಲದೆ ಜಗತ್ತಿನ ವಿವಿಧೆಡೆ ಮಲ್ಯ ಒಡೆತನದ ಆಸ್ತಿಗೆ ಅವಕಾಶ ನೀಡಬಾರದು ಎಂದು ಕೋರಿದ್ದ ಮಲ್ಯ ಪರ ವಕೀಲರ ಮನವಿಯನ್ನು ನ್ಯಾಯಾಧೀಶ ಹೆನ್‌ಶಾ ತಿರಸ್ಕರಿಸಿದ್ದಾರೆ. ಇದರಿಂದಾಗಿ ಮಲ್ಯ ಒಡೆತನ ಹೊಂದಿರುವ ವಿವಿಧ ದೇಶಗಳಲ್ಲಿನ ಆಸ್ತಿ ವಶಕ್ಕೂ ಅವಕಾಶವಿದ್ದು, ಅರ್ಜಿದಾರರು ಸಂಬಂಧಪಟ್ಟ ಪ್ರಕ್ರಿಯೆ ನಡೆಸಲು ಕೋರ್ಟ್‌ ಅವಕಾಶ ಕಲ್ಪಿಸಿದೆ. ಇದರಿಂದ ಸಾಲ ವಸೂಲಾತಿಗೆ ಅನುಕೂಲವಾಗಲಿದೆ.

ಕಿಂಗ್ ಫಿಶರ್ ಏರ್‌ಲೈನ್ಸ್ ಮತ್ತು ಸಂಬಂಧಿತ ಉದ್ಯಮ ಸಂಬಂಧ 9000 ಕೋಟಿ ರೂ. ಗೂ ಅಧಿಕ ಸಾಲ ಪಡೆದು ವಂಚಿಸಿರುವ ವಿಜಯ್ ಮಲ್ಯ ಲಂಡನ್‌ನಲ್ಲಿದ್ದುಕೊಂಡು, ತಮ್ಮ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Comments are closed.