ಪಟ್ನಾ/ರಾಂಚಿ : ಈ ವಾರಾಂತ್ಯ ನಡೆಯಲಿರುವ ತನ್ನ ಹಿರಿಯ ಮಗನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೈಲುವಾಸಿಯಾಗಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಐದು ದಿನಗಳ ಪೆರೋಲ್ ಕೇಳಿದ್ದಾರೆ.
ಲಾಲು ಹಿರಿಯ ಪುತ್ರ, ಹಾಲಿ ಶಾಸಕ ತೇಜ್ ಪ್ರತಾಪ್ ಯಾದವ್ ಅವರು ತಮ್ಮದೇ ಪಕ್ಷದ ಶಾಸಕರಾಗಿರುವ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಅವರನ್ನು ಇದೇ ಮೇ 12ರಂದು ಪಟ್ನಾದಲ್ಲಿ ವರಿಸಲಿದ್ದಾರೆ.
ಮೇ 10ರಿಂದ 14ರ ವರೆಗಿನ ಅವಧಿಗೆ ಲಾಲು ಅವರ ಪೆರೋಲ್ ಅರ್ಜಿಯನ್ನು ಬಂಧೀಖಾನೆಯ ಐಜಿ ಅವರ ಮುಂದೆ ಇಡಲಾಗಿದೆ. ಅದು ಮಂಜೂರಾಗುವ ವಿಶ್ವಾಸವಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಭೋಲಾ ಯಾವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
-Udayavani
Comments are closed.