ರಾಷ್ಟ್ರೀಯ

ದೇವಸ್ಥಾನದಲ್ಲಿ ಅಂಗಿ ಬನಿಯನ್‌ ನಿರ್ಬಂಧಕ್ಕೆ ಬ್ರೇಕ್‌

Pinterest LinkedIn Tumblr


ಮೂವಾಟ್ಟುಪುಯ: ಶ್ರೀನಾರಾಯಣ ಧರ್ಮಪರಿಪಾಲನಾ ಯೋಗಂ(ಎಸ್‌ಎನ್‌ಡಿಪಿ) ಸಂಸ್ಥೆಯ ದೇವಾಲಯಗಳಿಗೆ ಪುರುಷರು ಅಂಗಿ ಬನಿಯನ್‌ ಧರಿಸಿಕೊಂಡೇ ಒಳಗೆ ಹೋಗಬಹುದು.

ಕೇರಳ ರಾಜ್ಯಾದ್ಯಂತ ಇರುವ ಎಸ್‌ಎನ್‌ಡಿಪಿಯ ಆಡಳಿತಕ್ಕೆ ಒಳಪಡುವ ಎಲ್ಲ ದೇವಾಲಯಗಳಲ್ಲಿ ಪುರುಷರು ಅಂಗಿ ಅಥವಾ ಬನಿಯನ್‌ ಧರಿಸಿ ಒಳಪ್ರವೇಶಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಲ್ಲಿ ನಟೇಶನ್‌ ತಿಳಿಸಿದ್ದಾರೆ.

ಸಂಸ್ಥೆಯ ಆಡಳಿತದಲ್ಲಿರುವ ಮೂವಾಟ್ಟುಪುಯದ ಶ್ರೀಕುಮಾರ್ ಭಜನಾ ದೇವಸ್ವಮ್‌ ದೇವಾಲಯದಲ್ಲಿ ನಿಯಮ ಸಡಿಲಿಕೆಗಳನ್ನು ಘೋಷಣೆ ಮಾಡಿದ ಅವರು, ಶರ್ಟ್‌ ಧರಿಸಿ ದೇವಸ್ಥಾನದ ಒಳ ಪ್ರವೇಶಿಸಿದರು.
ವಿಜ್ಞಾನದ ಯಾವುದೇ ವಿಭಾಗದಲ್ಲಿ ಶರ್ಟ್‌ ಧರಿಸಿ ದೇವಾಲಯದ ಒಳಪ್ರವೇಶಿಸಬಾರದು ಎಂದಿಲ್ಲ. ಇಂತಹ ಹಳೆ ಪದ್ದತಿಗಳನ್ನು ಕೈಬಿಡುವುದು ಅಪರಾಧ ಅಲ್ಲ. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Comments are closed.