ರಾಷ್ಟ್ರೀಯ

ಇಸ್ಲಾಮಿಕ್‌ ದೇಶಗಳ ಸಂಘಟನೆಯಲ್ಲಿ ಭಾರತಕ್ಕೆ ವೀಕ್ಷಕನ ಸ್ಥಾನ: ಬಾಂಗ್ಲಾದೇಶ ಒತ್ತಾಯ

Pinterest LinkedIn Tumblr


ಹೊಸದಿಲ್ಲಿ: ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಇಸ್ಲಾಮಿಕ್‌ ಸಹಕಾರ ಸಂಘಟನೆಯಲ್ಲಿ ವೀಕ್ಷಕರ ಸ್ಥಾನ ನೀಡಬೇಕೆಂದು ಬಾಂಗ್ಲಾದೇಶ ಒತ್ತಾಯಿಸಿದ್ದು, ಪಾಕಿಸ್ತಾನಕ್ಕೆ ಇರಸುಮುರಸು ತಂದಿದೆ.

ಢಾಕಾದಲ್ಲಿ ಶನಿವಾರ ನಡೆದ ಓಐಸಿ (ORGANISATION OF ISLAMIC COOPERATION) ಸಂಘಟನೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಬಾಂಗ್ಲಾದೇಶ ಈ ಒತ್ತಾಯ ಮಂಡಿಸಿದೆ. ಮುಸ್ಲಿಮರು ಬಹುಸಂಖ್ಯಾತರಾಗಿಲ್ಲದ ಭಾರತದಂತಹ ದೇಶಗಳನ್ನು ಓಐಸಿಯಲ್ಲಿ ವೀಕ್ಷಕರಾಗಿ ಸೇರಿಸಿಕೊಳ್ಳಬಹುದು ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬುಲ್ ಹಸನ್‌ ಮಹಮೂದ್‌ ಈ ಪ್ರಸ್ತಾವ ಮುಂದಿಟ್ಟರು.

ಭಾರತದ ವಿರುದ್ಧ ಎಲ್ಲ ವೇದಿಕೆಗಳಲ್ಲಿ ದ್ವೇಷ ಕಾರುವ ಪಾಕಿಸ್ತಾನಕ್ಕೆ ಈ ಪ್ರಸ್ತಾವ ಮೆಚ್ಚುಗೆಯಾಗಿಲ್ಲ. ಆದರೆ ಬಾಂಗ್ಲಾದೇಶ ಪಟ್ಟು ಬಿಡದೆ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ದೇಶವನ್ನು ಓಐಸಿಯಿಂದ ಹೊರಗಿಡುವುದು ಸರಿಯಲ್ಲ ಎಂದು ಬಾಂಗ್ಲಾ ಪ್ರತಿಪಾದಿಸಿದೆ. ಜಾಗತಿಕ ಮುಸ್ಲಿಂ ಜನಸಂಖ್ಯೆಯ ಶೇ 10ರಷ್ಟು ಮುಸ್ಲಿಮರು ಭಾರತದಲ್ಲಿದ್ದಾರೆ.

9.2 ಕೋಟಿ ಜನಸಂಖ್ಯೆಯಿರುವ ಈಜಿಪ್ಟ್‌ನಲ್ಲಿ ಜಾಗತಿಕ ಮುಸ್ಲಿಂ ಜನಸಂಖ್ಯೆಯ ಶೇ 5ರಷ್ಟು ಮುಸ್ಲಿಮರಿದ್ದಾರೆ. ಜಾಗತಿಕ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಇಂಡೋನೇಷ್ಯಾ ಮತ್ತು ಪಾಕಿಸ್ತಾನದ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ.

‘ಓಐಸಿ ಸದಸ್ಯರಲ್ಲದ ಹಲವು ದೇಶಗಳಲ್ಲಿ ಬಹುದೊಡ್ಡ ಸಂಖ್ಯೆಯ ಮುಸ್ಲಿಮರಿದ್ದಾರೆ. ಆ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿರಬಹುದು; ಆದರೆ ಅವರ ಸಂಖ್ಯೆ ಹಲವು ಓಐಸಿ ಸದಸ್ಯ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ’ ಎಂದು ಆಲಿ ಪ್ರತಿಪಾದಿಸಿದರು.

Comments are closed.