ರಾಷ್ಟ್ರೀಯ

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು, ಗಾಂಧಿಗಿಂತ ಕಡಿಮೆಯಿಲ್ಲ ಜಿನ್ನಾ ಕೊಡುಗೆ: ಸಮಾಜವಾದಿ ಸಂಸದ

Pinterest LinkedIn Tumblr


ಗೋರಖ್‍‌ಪುರ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಕೊಡುಗೆ ಮಹಾತ್ಮಾ ಗಾಂಧಿ, ನೆಹರುಗಿಂತ ಕಡಿಮೆ ಏನಿಲ್ಲ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಸಂಸದ ಪ್ರವೀಣ್ ನಿಶಾದ್ ಅವರು ಜಿನ್ನಾ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ಶುಕ್ರವಾರ ಗೋರಖ್‌ಪುರ್‌ನಲ್ಲಿ ಮಾತನಾಡಿದ ಅವರು, ‘ಜಿನ್ನಾ ಹೆಸರಲ್ಲಿ ಬಿಜೆಪಿ ಕೊಳಕು ರಾಜಕೀಯ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರು ನೆಹರು ನೀಡಿದ ಕೊಡುಗೆಯಷ್ಟೇ ಜಿನ್ನಾ ಅವರು ಸಹ ನೀಡಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ’ ಎಂದಿದ್ದಾರೆ.

‘ದೇಶದ ಸ್ವಾತಂತ್ರ್ಯಕ್ಕೆ ಹಿಂದೂ-ಮುಸ್ಲಿಮ ಬಾಂಧವರು ಸಮಾನ ಕೊಡುಗೆ ನೀಡಿದ್ದಾರೆ. ಆದರೆ, ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಕೋಮು ಕಲಭೆಗಳನ್ನು ಪ್ರಚೋದಿಸುತ್ತಿದ್ದಾರೆ. ಇದು 2019ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಧರ್ಮದ ಹೆಸರಲ್ಲಿ ದೇಶ ವಿಭಜನೆಯ ಪ್ರಯತ್ನವಾಗಿದೆ. ಇಂಥ ಕೊಳಕು ರಾಜಕೀಯದಾಟಕ್ಕೆ ಅವಕಾಶ ನೀಡುವುದಿಲ್ಲ. ಭಾರತ ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು, ದೇಶದ ಏಕತೆಗೆ ಭಂಗ ತರಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ನಾವು ಭಾರತೀಯ ನಾಗರಿಕರು. ನಮ್ಮ ಮುಸ್ಲಿಂ ಸಹೋದರರು ಸಹ ಭಾರತದ ನಾಗರಿಕರೇ. ಹುತಾತ್ಮ ಭಗತ್ ಸಿಂಗ್ ಅವರನ್ನು ನೆನಪಿಸಿಕೊಂಡಂತೆ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಶ್ಫಾಕ್-ಉಲ್ಲಾ ಖಾನ್ ಹಾಗೂ ವೀರ್ ಅಬ್ದುಲ್ ಹಮೀದ್ ಅವರನ್ನು ಸಹ ನೆನೆಯುತ್ತೇವೆ. ಆದರೆ, ಬಿಜೆಪಿಯವರು ಮುಸ್ಲಿಂ ಹುತಾತ್ಮರ ಹೆಸರುಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ’ ಎಂದು ಪ್ರವೀಣ್ ನಿಶಾದ್ ಆರೋಪಿಸಿದ್ದಾರೆ.

Comments are closed.