ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಯಾವುದೇ ಮುಲಾಜು ಮತ್ತು ಸಂಕೋಚ ಇಲ್ಲದ ದಾಳಿಯೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ “ಕರ್ನಾಟಕದ ಮೋಸ್ಟ್ ವಾಂಟೆಡ್’ ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಕರ್ನಾಟಕದ ಚುನಾವಣೆಯಲ್ಲಿ ಭಾವೀ ಮುಖ್ಯಮಂತ್ರಿಯಾಗಿ ಬಿಂಬಿಸಲ್ಪಡುತ್ತಿರುವ ಬಿ ಎಸ್ ಯಡಿಯೂರಪ್ಪ ಮತ್ತು ಇತರ ಕೆಲವು ಅಭ್ಯರ್ಥಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮಾತನಾಡುವಂತೆ ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ಜೀ, ನೀವು ಈ ವಿಷಯಗಳ ಬಗ್ಗೆ ಐದು ನಿಮಿಷಗಳ ಕಾಲ ಮಾತನಾಡುವಿರಾ ಎಂದು ವಿಡಿಯೋದಲ್ಲಿ ಸವಾಲೊಡ್ಡಲಾಗಿದೆ. ಮಾತ್ರವಲ್ಲದೆ ಮೋದಿ ಅವರು ಈ ವಿಷಯಗಳ ಬಗ್ಗೆ ಐದು ನಿಮಿಷ ಮಾತನಾಡಲು ಕೈಯಲ್ಲಿ ಚೀಟಿ ಹಿಡಿದುಕೊಳ್ಳಬಹುದೆಂದು ಹೇಳಲಾಗಿದೆ.
Dear Modi ji,
You talk a lot. Problem is, your actions don’t match your words. Here’s a primer on your candidate selection in Karnataka.
It plays like an episode of “Karnataka’s Most Wanted”. #AnswerMaadiModi pic.twitter.com/G97AjBQUgO
— Rahul Gandhi (@RahulGandhi) May 5, 2018
ಕರ್ನಾಟಕದ ಮೋಸ್ಟ್ ವಾಂಟೆಡ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಲ್ಲಿ ರಾಹುಲ್ ಗಾಂಧಿ ಹೀಗೆ ಬರೆದಿದ್ದಾರೆ :
”ಡಿಯರ್ ಮೋದಿ ಜೀ, ನಿಮ್ಮ ತುಂಬ ಮಾತನಾತ್ತೀರಿ; ಸಮಸ್ಯೆ ಏನೆಂದರೆ ನಿಮ್ಮ ಮಾತಿಗೂ ಕೃತಿಗೂ ತಾಳೆ ಇಲ್ಲವಾಗಿದೆ. ಕರ್ನಾಟಕ ಚುನಾವಣೆಯಲ್ಲಿ ನೀವು ಅಭ್ಯರ್ಥಿಗಳನ್ನು ಆಯ್ದಿರುವಲ್ಲಿ ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳಿವೆ. ಇದು ಕರ್ನಾಟಕದ ಮೋಸ್ಟ್ ವಾಂಟೆಡ್ ಎನ್ನುವ ಶೀರ್ಷಿಕೆಯಲ್ಲಿ ಪ್ಲೇ ಆಗುತ್ತದೆ. ಹ್ಯಾಶ್‌ಟ್ಯಾಗ್ ಆನ್ಸರ್ ಮಾಡಿ ಮೋದಿ”.
-Udayavani
Comments are closed.