ರಾಷ್ಟ್ರೀಯ

ಬಿಹಾರದಲ್ಲಿ ಪಲ್ಟಿಯಾಗಿ ಹೊತ್ತಿ ಉರಿದ ಬಸ್‌; 27 ಜನ ಸಾವು

Pinterest LinkedIn Tumblr

ಪಟ್ನಾ: ಬಿಹಾರದ ಮೊತಿಹಾರಿಯಲ್ಲಿ ಗುರುವಾರ ಬಸ್‌ವೊಂದು ಪಲ್ಟಿಯಾಗಿ 27 ಜನ ಪ್ರಯಾಣಿಕರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮಧ್ಯಾಹ್ನ ಘಟನೆ ನಡೆದಿದ್ದು, ಬೆಂಕಿಯ ಜ್ವಾಲೆಗೆ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಸ್ಥಳೀಯರು ಹಾಗೂ ದಾರಿಹೋಕರು ಜಮಾಯಿಸಿದ್ದಾರೆ. ಶವಗಳನ್ನು ಹೊರ ತೆಗೆಯಲಾಗಿದ್ದು, ಅವರ ಗುರುತು ಪತ್ತೆ ಮಾಡಲಾಗುತ್ತಿದೆ.

ಇದು ನಿಜವಾಗಿಯೂ ದುಃಖಕರ ಸಂಗತಿ. ಘಟನೆಯಲ್ಲಿ ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲಾಗುವುದು ಎಂದು ಬಿಹಾರದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರು ಹೇಳಿದ್ದಾರೆ.

Comments are closed.