ರಾಷ್ಟ್ರೀಯ

ಏಳನೇ ಪತ್ನಿಯಿಂದ ಸಿಕ್ಕಿಬಿದ್ದ ಒಂಬತ್ತು ಪತ್ನಿಯರ ಗಂಡ

Pinterest LinkedIn Tumblr


ಲಖನೌ: ತನ್ನನ್ನು ತಾನು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಬಿಂಬಿಸಿಕೊಂಡಿದ್ದ ವಂಚಕನೊಬ್ಬ 9 ಮದುವೆ ಮಾಡಿಕೊಂಡಿದ್ದು ಕಡೆಗೆ 7ನೇ ಪತ್ನಿಯಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಲಖನೌನಲ್ಲಿ ನಡೆದಿದೆ. ಸದ್ಯಕ್ಕೆ ಠಾಕೂರ್‌ಗಂಜ್‌ ಪೊಲೀಸರ ಅತಿಥಿಯಾಗಿರುವ ಈತ ಮೂರು ಸಲ ಮದುವೆಯಾಗಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಆದರೆ ಈತನ ಪತ್ನಿಯರು ಮಾತ್ರ ಮೂರಲ್ಲ ಇನ್ನೂ ಜಾಸ್ತಿ ಅಂದಿದ್ದಾರೆ.

ಒಂದು ವರ್ಷದ ಹಿಂದೆ ಮ್ಯಾಟ್ರಿಮನಿ ವೆಬ್‌ಸೈಟ್ ಮೂಲಕ ಲಖನೌನ ಠಾಕೂರ್‌‍ಗಂಜ್‌ ಮೂಲದ ಮಹಿಳೆಯೊಬ್ಬರನ್ನು ವರಿಸಿದ್ದ ಸಮೀರ್ ಅಹಮದ್ ಖನೋಫ್ ಚಿತ್ತೂರ್. ಮದುವೆ ಬಳಿಕ ಲಖನೌನಲ್ಲೇ ವಾಸವಾಗುವಂತೆ ಮಹಿಳೆಯ ಸಹೋದರ ಸಮೀರ್‌ಗೆ ಹೇಳಿದ್ದ, ಅದನ್ನು ಸಮೀರ್ ಅಂಗೀಕಸಿರಿದ್ದ.

ಆದರೆ ತನ್ನ ಮೊಬೈಲ್ ಫೋನನ್ನು ಯಾವುದೇ ಕಾರಣಕ್ಕೂ ಪತ್ನಿಗೆ ಮುಟ್ಟಲು ಬಿಡುತ್ತಿರಲಿಲ್ಲ. ಒಮ್ಮೆ ಹೀಗೆ ಫೋನ್‍ನಲ್ಲಿ ನೇಹಾ ಎಂಬುವವರು ಕರೆ ಮಾಡಿ ತಾನು ಅವರ ಪತ್ನಿ ಎಂದು ಇನ್ನೊಬ್ಬ ಪತ್ನಿ ಯಾಸ್ಮೀನ್‍ಗೆ ಹೇಳಿದ್ದರು.

ಈ ಮೂವರು ಹೇಗೋ ಒಬ್ಬರನ್ನೊಬ್ಬರು ಸಂಪರ್ಕಿಸಿ ತಾವು ಮೋಸ ಹೋಗಿರುವುದನ್ನು ತಿಳಿದುಕೊಂಡರು. ಈ ಬಗ್ಗೆ ಸಮೀರ್‌ರನ್ನು ಯಾಸ್ಮೀನ್ ಪ್ರಶ್ನಿಸಿದಾಗ, ಏನೋ ಸುಳ್ಳು ಹೇಳಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಆಗ ಪೊಲೀಸರಿಗೆ ದೂರು ನೀಡಿದ ಕಾರಣ ಸಮೀರ್ ಬಂಧನಕ್ಕೊಳಗಾಗಿದ್ದಾನೆ.

ನೇಹಾ ಅವರ ಪ್ರಕಾರ ಸಮೀರ್‌ ಆಗಿರುವುದು ಮೂರಲ್ಲ ಇನ್ನೂ ಹೆಚ್ಚಿನ ಮಹಿಳೆಯರಿಗೆ ಹೀಗೆಯೇ ಮಾಡಿದ್ದಾನೆ ಎಂದಿದ್ದಾರೆ. ಈತನಿಗೆ ಯಾವುದೇ ಉದ್ಯೋಗ ಇಲ್ಲ. ಪತ್ನಿಯರ ಹಣದಲ್ಲೇ ಜೀವನ ನಡೆಸುತ್ತಿದ್ದ. ಸಮೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ ಠಾಕೂರ್‌ಗಂಜ್ ಇನ್ಸ್‌ಪೆಕ್ಟರ್ ದೀಪಕ್ ದುಬೆ.

Comments are closed.