ರಾಷ್ಟ್ರೀಯ

ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ, ಮೂವರ ಸೆರೆ

Pinterest LinkedIn Tumblr


ಜೆಹಾನಾಬಾದ್‌, ಬಿಹಾರ : ಹದಿಮೂರರ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಏಳು ಹುಡುಗರು ಮತ್ತು ಕೆಲವು ಪರುಷರನ್ನು ಒಳಗೊಂಡ ಗುಂಪೊಂದು ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಬೆತ್ತಲುಗೊಳಿಸಿದ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿ ನಿನ್ನೆ ಭಾನುವಾರ ನಡೆದಿದೆ.

ಕಾಮುಕರ ಈ ಗುಂಪು ತಾನು ಹುಡುಗಿಯ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಮಾಧ್ಯಮ ಮತ್ತು ಮೆಸೇಜಿಂಗ್‌ ಆ್ಯಪ್‌ ನಲ್ಲಿ ಕೂಡ ಅಪ್‌ಲೋಡ್‌ ಮಾಡಿರುವ ಆಘಾತಕಾರಿ ವಿದ್ಯಮಾನ ವರದಿಯಾಗಿದೆ.

ಹಲ್ಲೆಕೋರರಲ್ಲಿ ಕೆಲವರು ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ಅವರಲ್ಲಿನ ಇಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹುಡುಗಿಯ ತನ್ನನ್ನು ಬಿಟ್ಟುಬಿಡುವಂತೆ ಕಾಮುಕರಲ್ಲಿ ಅಂಗಲಾಚಿಕೊಂಡ ಹೊರತಾಗಿಯೂ ಅವರು ಆಕೆಯನ್ನು ವಿವಸ್ತ್ರಗೊಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಅತ್ಯಂತ ಪೈಶಾಚಿಕವಾಗಿ ನಡೆದ ಈ ಘಟನೆಗೆ ಸಂಬಂಧಿಸಿ ಪೊಲೀಸರು ಈ ವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಡಿಯೋದಲ್ಲಿ ಕಂಡುಬಂದಿರುವ ಲೈಂಗಿಕ ದೌರ್ಜನ್ಯ ನಿರತ ವ್ಯಕ್ತಿಯನ್ನು ಕೂಡ ಸೆರೆ ಹಿಡಿದಿದ್ದಾರೆ.

ವಿಶೇಷ ತನಿಖಾ ದಳದ ಅಧಿಕಾರಿಗಳು ಈ ಬಂಧನಗಳನ್ನು ಭರ್ತುವಾ ದಲ್ಲಿ ನಡೆಸಿದ್ದಾರೆ. ಬಂಧಿತರೆಲ್ಲರೂ 18 ಮೀರಿದವರಾಗಿದ್ದು ಅವರನ್ನು ಅಮರ್‌ ಕುಮಾರ್‌, ದೀಪಕ್‌ ಕುಮಾರ್‌ ಮತ್ತು ಸುನೀಲ ಕುಮಾರ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಭರ್ತುವಾ ನಿವಾಸಿಗಳು. ಈ ಪೈಕಿ ಅಮರ್‌ ಕುಮಾರ್‌ ಎಂಬಾತನು ತನ್ನ ಸಹಚರನೊಂದಿಗೆ ವಿಡಿಯೋ ಮಾಡಿದ ಖದೀಮನಾಗಿದ್ದಾನೆ.

ಹುಡುಗಿಯು ತನ್ನ ಬಾಯ್‌ ಫ್ರೆಂಡ್‌ನ‌ನ್ನು ಭೇಟಿಯಾಗಿ ಮರಳುತ್ತಿದ್ದ ವೇಳೆ ಎದುರಾದ ಕಾಮುಕ ಗುಂಪಿನವರು, ಹುಡುಗನನ್ನು ಭೇಟಿಯಾದದುಕ್ಕೆ ಹುಡುಗಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪಟ್ನಾ ವಲಯದ ಇನ್ಸ್‌ಪೆಕ್ಟರ್‌ ಜನರಲ್‌ ನಯ್ಯರ್‌ ಹಸನೇನ್‌ ಖಾನ್‌ ತಿಳಿಸಿದ್ದಾರೆ.

-ಉದಯವಾಣಿ

Comments are closed.