ರಾಷ್ಟ್ರೀಯ

ಜೆಎನ್‌ಯುನಲ್ಲಿ ‘ಲವ್ ಜಿಹಾದ್ ‘ ಕಲಹ

Pinterest LinkedIn Tumblr


ಹೊಸದಿಲ್ಲಿ: ಸದಾ ವಿವಾದದಿಂದಲೇ ಸುದ್ದಿಯಾಗುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಮತ್ತೆ ಗಲಾಟೆ ನಡೆದಿದೆ. ‘ಲವ್ ಜಿಹಾದ್’ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳ ನಡುವೆ ಕಲಹ ಭುಗಿಲೆದ್ದಿದೆ ಎಂದು ವರದಿಯಾಗಿದೆ.

ವಿವೇಕಾನಂದ ವಿಚಾರ ಮಂಚ್ ಹೆಸರಿನ ಸಾಂಸ್ಕೃತಿಕ ಸಂಘಟನೆ ಸಾಬರಮತಿ ಮೈದಾನದಲ್ಲಿ ‘ದೇವರ ಸ್ವಂತ ನಾಡಿನಲ್ಲಿ ಪ್ರೀತಿಯ ಹೆಸರಲ್ಲಿ ಉನ್ಮಾದ’ (‘In the Name of Love-Melancholy of God’s Own Country’) ಎಂಬ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರ ಪ್ರದರ್ಶನದ ಪರ ನಿಂತರೆ, ಎಡಪಂಥೀಯ ವಿಚಾರಧಾರೆ ಬೆಂಬಲಿಸುವ ವಿದ್ಯಾರ್ಥಿಗಳು ವಿರೋಧ ನಿಂತಿದ್ದರು. ಪರ- ವಿರೋಧ ತಾರಕಕ್ಕೇರಿ ಪರಷ್ಪರ ಕಲ್ಲುತೂರಾಟ, ಮಾರಾಮಾರಿ ನಡೆದಿದೆ.

“ಚಿತ್ರವು ಕೋಮು ವಿಷ ಮತ್ತು ಧರ್ಮಾಂಧತೆ ಹರಡುತ್ತಿದೆ”, ಎಂಬುದು ವಿಶ್ವವಿದ್ಯಾಲಯದ ಆವರಣದಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಎಡಪಂಥೀಯ ಕಾರ್ಯಕರ್ತರ ಆರೋಪ.

ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಹಾದಿಯಾ ವಿವಾಹ, ಲವ್ ಜಿಹಾದ್ ಪ್ರಕರಣವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದ್ದರೂ, ಚಿತ್ರದಲ್ಲಿ ಆಕೆಯ ಹೆಸರನ್ನು ಬಳಸಿದ್ದಕ್ಕೆ ನಾವು ಧ್ವನಿ ಎತ್ತಿದ್ದೆವು ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ತಮ್ಮನ್ನು ತಾವು ಸಮರ್ಥಿಸಿಕೊಂಡಿವೆ.

Comments are closed.