ರಾಷ್ಟ್ರೀಯ

ಪುಲ್ವಾಮಾ: ಪಿಡಿಪಿ ನಾಯಕ ಗುಲಾಮ್‌ ನಬಿ ಪಟೇಲ್‌ ಉಗ್ರರ ಗುಂಡಿಗೆ ಬಲಿ

Pinterest LinkedIn Tumblr


ಶ್ರೀನಗರ : PDP ನಾಯಕ ಗುಲಾಮ್‌ ನಬಿ ಪಟೇಲ್‌ ಅವರನ್ನು ಉಗ್ರರು ಇಂದು ಬುಧವಾರ ಜಮ್ಮು ಕಾಶ್ಮೀರದ ಪುಲ್ವಾಮಾದ ರಾಜಪೋರಾದಲ್ಲಿ ಗುಂಡಿಕ್ಕಿ ಸಾಯಿಸಿದ್ದಾರೆ.

ಗುಲಾಮ ನಬೀ ಪಟೇಲ್‌ ಅವರು ಇಂದು ಬುಧವಾರ ಯಾದರ್‌ನಿಂದ ಪುಲ್ವಾಮಾಗೆ ಬರುತ್ತಿದ್ದಾಗ ಉಗ್ರರು ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಅವರು ಮಾರ್ಗ ಮಧ್ಯೆ ಕೊನೆಯುಸಿರೆಳೆದರು.

ಪಟೇಲ್‌ ಅವರ ಇಬ್ಬರು ಭದ್ರತಾ ಅಧಿಕಾರಿಗಳು ಕೂಡ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟೇಲ್‌ ಮೇಲೆ ದಾಳಿ ನಡೆಸಿದ ಉಗ್ರರು ತಮ್ಮ ಕೆಲಸ ಮುಗಿಯುತ್ತಲೇ ಸ್ಥಳದಿಂದ ಪರಾರಿಯಾದರು.

ಪಟೇಲ್‌ ಅವರು ಡಾಂಗೇರಪೋರಾ ಶಾದಿಮಾರ್ಗ್‌ ನಿವಾಸಿಯಾಗಿದ್ದು ಈ ಹಿಂದೆ ಅವರ ಕಾಂಗ್ರೆಸ್‌ ನಲ್ಲಿದ್ದರು.

-ಉದಯವಾಣಿ

Comments are closed.