ರಾಷ್ಟ್ರೀಯ

ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲ, ಸಂಸತ್ ಕೂಡಾ ಕಾಸ್ಟಿಂಗ್ ಕೌಚ್ ಗೆ ಹೊರತಾಗಿಲ್ಲ: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ

Pinterest LinkedIn Tumblr

ನವದೆಹಲಿ: ಸಿನಿಮಾ ಕ್ಷೇತ್ರವಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ, ಸಂಸತ್ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.

ಕೇವಲ ಸಿನಿಮಾ ಕ್ಷೇತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದ್ದೇ ಇದೆ. ಸಂಸತ್ ಇದಕ್ಕೆ ಹೊರತಾಗಿದೆ ಎಂದುಕೊಳ್ಳಬೇಡಿ, ಕಾಸ್ಟಿಂಗ್ ಕೌಚ್ ನ್ನು #MeToo ಘೋಷಣೆ ಮೂಲಕ ಸಮಸ್ತ ಭಾರತವೇ ವಿರೋಧಿಸಬೇಕಿರುವ ಸಮಯ ಬಂದಿದೆ ಎಂದು ರೇಣುಕಾ ಚೌಧರಿ ಕರೆ ನೀಡಿದ್ದಾರೆ.

ಕಾಸ್ಟಿಂಗ್ ಕೌಚ್ ಸಂಸ್ಕೃತಿಯ ಬಗ್ಗೆ ಬಾಲಿವುಡ್ ನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ರೇಣುಕಾ ಚೌಧರಿ ಈ ಮಾತನ್ನು ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಸರೋಜ್ ಖಾನ್, ಸರ್ಕಾರಿ ಕಚೇರಿಗಳಲ್ಲಿಯೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ, ಆದರೆ ಕೇವಲ ಬಾಲಿವುಡ್ ನ್ನು ಮಾತ್ರ ದೂಷಿಸಲಾಗುತ್ತಿದೆ ಎಂದು ಸರೋಜ್ ಖಾನ್ ಹೇಳಿದ್ದರು.

Comments are closed.