ರಾಷ್ಟ್ರೀಯ

ವಸತಿ ಕಟ್ಟಡದಿಂದ ಹಾರಿ ಐಟಿ ಇನ್ಸ್‌ಪೆಕ್ಟರ್‌ ಪತ್ನಿ, ಪುತ್ರ ಆತ್ಮಹತ್ಯೆ

Pinterest LinkedIn Tumblr


ಸೂರತ್‌: ಆದಾಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ ರಾಮ್‌ ಮಹೇಶ್‌ ನೈನ್‌ ಅವರ ಪತ್ನಿ 29ರ ಹರೆಯದ ಚಂಚಲ್‌ ನೈನ್‌ ಇಂದು ತಮ್ಮ ವಸತಿ ಕಟ್ಟಡದ 12ನೇ ಮಾಳಿಗೆಯಿಂದ ಮೂರು ವರ್ಷ ಪ್ರಾಯದ ಮಗನನ್ನು ಕೆಳಕ್ಕೆಸೆದು ಬಳಿಕ ತಾನೂ ಕೆಳ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ತಿಳಿಸಿರುವ ಪ್ರಕಾರ ಚಂಚಲ್‌ ನೈನ್‌ ಮೊದಲು ತನ್ನ ಮಗನನ್ನು 12ನೇ ಮಾಳಿಗೆಯಿಂದ ಕೆಳಕ್ಕೆಸೆಳೆದಳು; ಬಳಿಕ ತಾನೂ ಹಾರಿದಳು; ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು; ಆದರೆ ಕಾರಣವೇನು ಎಂಬುದು ಗೊತ್ತಾಗಿಲ್ಲ.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.