ರಾಷ್ಟ್ರೀಯ

ದಾವೂದ್‌ ಆಸ್ತಿ ವಶಪಡಿಸದಿರಲು ಸಂಬಂಧಿಕರ ಅರ್ಜಿ: ಸುಪ್ರೀಂನಿಂದ ವಜಾ

Pinterest LinkedIn Tumblr


ಹೊಸದಿಲ್ಲಿ: 1993ರ ಮುಂಬಯಿ ಬ್ಲಾಸ್ಟ್‌ ನ ಮಾಸ್ಟರ್‌ ಮೈಂಡ್‌ ಮತ್ತು ಡಿ ಕಂಪೆನಿ ಬಾಸ್‌ ಆಗಿರುವ ಉಗ್ರ ದಾವೂದ್‌ ಇಬ್ರಾಹಿಂ ಅಕ್ರಮ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ಕೇಂದ್ರ ಸರಕಾರಕ್ಕೆ ಆದೇಶಿಸಿತು.

ಮುಂಬಯಿಯಲ್ಲಿನ ದಾವೂದ್‌ ಒಡೆತನದ ವಸತಿ ಕಟ್ಟಡವನ್ನು ಮುಟ್ಟು ಗೋಲು ಹಾಕದಂತೆ ದಾವೂದ್‌ ತಾಯಿ ಅಮೀನಾ ಬೀ (ವಿಧಿವಶರಾಗಿರುವ ಇವರ ಕಾನೂನುಸಮ್ಮತ ಪ್ರತಿನಿಧಿಗಳು) ಮತ್ತು ಸಹೋದರಿ ಹಸೀನಾ ಇಬ್ರಾಹಿಂ ಪಾರ್ಕ್‌ರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್‌ ಆರ್‌ ಕೆ ಅಗ್ರವಾಲ್‌ ನೇತ್ರತ್ವದ ಪೀಠ ವಜಾಗೊಳಿಸಿತು.

ಈ ವಸತಿ ಕಟ್ಟಡಗಳ ಸರಕಾರ ವಶಕ್ಕೆ ಪಡೆಯುವ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು ಇದರ ಮುಟ್ಟುಗೋಲಿಗೆ ಸಂಬಂಧಿಸಿ ತಮಗೆ ಯಾವುದೇ ನೊಟೀಸ್‌ ಜಾರಿ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ದಿಲ್ಲಿ ಹೈಕೋರ್ಟ್‌ ತಮ್ಮ ಅರ್ಜಿಯನ್ನು ಕಳ್ಳಸಾಗಣೆಗಾರರು ಮತ್ತು ವಿದೇಶ ವಿನಿಮಯ ಅಕ್ರಮ ನಡೆಸುವವರ ವಿರುದ್ಧ (ಆಸ್ತಿ ಮುಟ್ಟುಗೋಲು) ಕಾಯಿದೆಯಡಿ ತಮ್ಮ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

ದಾವೂದ್‌ ಇಬ್ರಾಹಿಂ ಒಡೆತನದಲ್ಲಿ ಮುಂಬಯಿಯ ನಾಗಪಾಡದಲ್ಲಿ ಒಟ್ಟು ಏಳು ವಸತಿ ಕಟ್ಟಡ ಇದೆ. ಇವುಗಳಲ್ಲಿ ಎರಡು ಆತನ ತಾಯಿ ಅಮೀನಾ ಅವರ ಹೆಸರಲ್ಲಿದೆ; ಉಳಿದ ಐದು ಹಸೀನಾ ಅವರ ಹೆಸರಲ್ಲಿದೆ. ಆದರೆ ಇವೆಲ್ಲವನ್ನೂ ದಾವೂದ್‌ ಇಬ್ರಾಹಿಂ ಅಕ್ರಮವಾಗಿ ಕಲೆ ಹಾಕಿರುವುದರಿಂದ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂದು ಕೋರ್ಟ್‌ ಹೇಳಿತು.

-ಉದಯವಾಣಿ

Comments are closed.