
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರ ಸುರಕ್ಷತೆ ವಿಚಾರದಲ್ಲೆ ಮತ್ತೆ ಮುಜುಗರಕ್ಕೀಡಾಗಿದ್ದು, ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಕಾಮುಕನೋರ್ವ ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.
ಪಶ್ಚಿಮ ದೆಹಲಿಯ ಮಂಗೋಲ್ ಪುರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ನೆರೆ ಮನೆಯ ಯುವಕನೇ ಆತ್ಯಾಚಾರ ಮಾಡಿ ಅದನ್ನು ವಿಡಿಯೋ ಕೂಡ ಮಾಡಿ ವಾಟ್ಸಪ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ದುರಂತವೆಂದರೆ ಈ ಅತ್ಯಾಚಾರ ವಿಚಾರ ಬಾಲಕಿಯ ಪೋಷಕರಿಗೆ ಆರಂಭದಲ್ಲಿ ತಿಳಿದಿರಲಿಲ್ಲ. ಆದರೆ ವಾಟ್ಸಪ್ ವಿಡಿಯೋ ಕ್ರಮೇಣ ಬಾಲಕಿಯ ಪೋಷಕರಿಗೂ ಬಂದಿದ್ದು, ಈ ವಿಡಿಯೋದಲ್ಲಿರುವ ಬಾಲಕಿ ತಮ್ಮ ಮಗಳೇ ಎಂಬುದನ್ನು ನೋಡಿ ಪೋಷಕರು ಕುಸಿದಿದ್ದಾರೆ.
ಕೂಡಲೇ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಇನ್ನು ವಿಡಿಯೋದಲ್ಲಿರುವ ಅತ್ಯಾಚಾರಿ ಯುವಕನನ್ನು 30 ವರ್ಷದ ಬಂಟಿ ಎಂದು ಗುರುತಿಸಲಾಗಿದ್ದು, ಈತ ಬಾಲಕಿಯ ನೆರೆಮನೆಯ ನಿವಾಸಿಯಂತೆ. ಬಾಲಕಿಗೆ ತಿಂಡಿ ನೀಡುವುದಾಗಿ ಪುಸಲಾಯಿಸಿ ಸಮೀಪದ ನಿರ್ಜನ ಸಮುದಾಯ ಭವನಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಈ ಕೃತ್ಯವನ್ನು ತನ್ನ ಇಬ್ಬರು ಸ್ನೇಹಿತರಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡಿಸಿಕೊಂಡು ತನ್ನ ಸ್ನೇಹಿತರಿಗೆ ರವಾನೆ ಮಾಡಿದ್ದಾನೆ.
ಇನ್ನು ಆರೋಪಿ ಬಂಟಿ ವಿರುದ್ದ ದೆಹಲಿ ಪೊಲೀಸರು ಪೋಕ್ಸೋ ಕಾಯಿದೆಯಡಿಯಲ್ಲಿ ಬಂಧಿಸಿದ್ದು, ವಿಡಿಯೋ ಮಾಡಿದ್ದ ಆತನ ಸ್ನೇಹಿತರನ್ನೂ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಥುವಾ ಮತ್ತು ಉನ್ನಾವೋ ಅತ್ಯಾಚಾರ ಸಂಬಂಧ ಇಡೀ ದೇಶವೇ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರ ಬೆನ್ನಲ್ಲೇ ದೆಹಲಿಯಲ್ಲಿ ಅಸ್ವಸ್ಥ ಬಾಲಕಿ ಮೇಲಿನ ಅತ್ಯಾಚಾರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
Comments are closed.