ರಾಷ್ಟ್ರೀಯ

ಮಹಿಳೆಯರೆದುರು ಹಸ್ತಮೈಥುನ: ಟೇಕ್‌ ವೋಂಡೋ ಶಿಕ್ಷಕ ಅರೆಸ್ಟ್‌

Pinterest LinkedIn Tumblr


ಹೊಸದಿಲ್ಲಿ: ಈಚೆಗಷ್ಟೆ ಜೈಲಿನಿಂದ ಬಿಡುಗಡೆಗೊಂಡಿದ್ದ ಟೇಕ್‌ ವೋಂಡೋ ಶಿಕ್ಷಕನೊಬ್ಬ ನೈಋತ್ಯ ದಿಲ್ಲಿಯ ವಸಂತ್‌ ಕುಂಜ್‌ನಲ್ಲಿ ಇಬ್ಬರು ಮಹಿಳೆಯರನ್ನು ಗುರಿ ಇರಿಸಿ ಅವರ ಮೇಲೆ ಹಠಾತ್‌ ಬೆಳಕು ಚೆಲ್ಲಿ ಹಸ್ತಮೈಥುನ ಮಾಡಿಕೊಂಡ ಘಟನೆ ನಡೆದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಟೇಕ್‌ ವೋಂಡೋ ಶಿಕ್ಷಕ ಸಂದೀಪ್‌ ಚೌಹಾಣ್‌ ಎಸಗಿದ ಈ ಅಸಹ್ಯ ಕೃತ್ಯದಿಂದ ಜುಗುಪ್ಸೆ ಪಟ್ಟ ಮಹಿಳೆಯರಲ್ಲಿ ಒಬ್ಬಳು ಪೊಲೀಸರಿಗೆ ದೂರು ನೀಡಿದಳು. ಆ ಪ್ರಕಾರ ಪೊಲೀಸರು ಆತನನ್ನು ಬಂಧಿಸಿದರು.

ಮದ್ಯದ ಅಮಲಿನಲ್ಲಿ ಮಹಿಳೆಯರ ಮೇಲೆ ಬೆಳಕು ಚೆಲ್ಲುವುದು, ಅವರೆದುರು ಹಸ್ತ ಮೈಥುನ ಮಾಡಿಕೊಳ್ಳುವುದು, ಅಶ್ಲೀಲ ಪದಗಳಿಂದ ಚುಡಾಯಿಸುವುದು ಮುಂತಾದ ಅಪರಾಧಗಳನ್ನು ಎಸಗುವ ಅಭ್ಯಾಸ ಹೊಂದಿರುವ ಚೌಹಾಣ್‌ ವಿರುದ್ಧ ಸುಮಾರು 20 ಸರ ಕಳ್ಳತನ, ಕಳವು, ಲೈಂಗಿಕ ಕಿರುಕುಳದ ಕೇಸುಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

-ಉದಯವಾಣಿ

Comments are closed.