ರಾಷ್ಟ್ರೀಯ

ಉನ್ನಾವೋ ರೇಪ್‌ ಪ್ರಕರಣ: ಬಿಜೆಪಿ ಶಾಸಕನ ಸಹೋದರ ಅರೆಸ್ಟ್‌

Pinterest LinkedIn Tumblr


ಲಕ್ನೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ಸಂಭವಿಸಿದ ಹದಿನೆಂಟರ ಹರೆಯದ ತರುಣಿಯ ಮೇಲಿನ ಗ್ಯಾಂಗ್‌ರೇಪ್‌ ಮತ್ತು ಆಕೆಯ ತಂದೆಯ ಪೊಲೀಸ್‌ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಂದು ಬಿಜೆಪಿ ಶಾಸಕನ ಸಹೋದರ ಅತುಲ್‌ ಸಿಂಗ್‌ ನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಈ ಬಗ್ಗೆ ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಆನಂದ ಕುಮಾರ್‌ ಅವರು ಉನ್ನಾವೋದಲ್ಲಿ ಬಿಜೆಪಿ ಶಾಸಕರ ಸಹೋದರನನ್ನು ಬಂಧಿಸಲಾಗಿದ್ದು ಇಡಿಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸಲಿದೆ ಎಂದು ಹೇಳಿದರು.

ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೇಂಗಾರ್‌ ತನ್ನ ಮೇಲೆ ಅತ್ಯಾಚಾರ ಎಸಗಿದ್ದುದಾಗಿ ಸಂತ್ರಸ್ತ ತರುಣಿಯು ಪೊಲೀಸರಿಗೆ ದೂರು ನೀಡಿದ್ದಳು.

-ಉದಯವಾಣಿ

Comments are closed.