ರಾಷ್ಟ್ರೀಯ

2,600 ಕೋಟಿ ಮೀರಿದ ವಂಚನೆ: ವಡೋದರ ಕಂಪೆನಿ ಮೇಲೆ ಐಟಿ ದಾಳಿ

Pinterest LinkedIn Tumblr


ಅಹ್ಮದಾಬಾದ್‌ : ವಿವಿಧ ಬ್ಯಾಂಕುಗಳಿಗೆ 2,654 ಕೋಟಿ ರೂ.ವಂಚಿಸಿರುವ ವಡೋದರದ ಡೈಮಂಡ್‌ ಪವರ್‌ ಇನ್‌ಫ್ರಾಸ್ಟಕ್ಚರ್‌ (ಡಿಪಿಐಎಲ್‌) ಕಂಪೆನಿ ಮತ್ತು ಅದರ ಪ್ರಮೋಟರ್‌ಗಳ ಕಾರ್ಯಾಲಯಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವಡೋದರ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಸುಮಾರು 17 ತಾಣಗಳಲ್ಲಿ ಐಟಿ ದಾಳಿ ನಡೆಸಲಾಗಿದೆ ಇವುಗಳಲ್ಲಿ ವಡೋದರ ನಗರದ ಡಿಪಿಐಎಲ್‌ ಕಾರ್ಪೊರೇಟ್‌ ಕಚೇರಿ ಕೂಡ ಸೇರಿದೆ ಎಂದು ಹಿರಿಯ ಐಟಿ ಅಧಿಕಾರಿ ತಿಳಿಸಿದ್ದಾರೆ.

ಡಿಪಿಐಎಲ್‌ ಮತ್ತು ಅದರ ಪ್ರಮೋಟರ್‌ಗಳು ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತೀವ್ರ ನಿಗಾದಲ್ಲಿ ಇದ್ದು ಈ ಕಂಪೆನಿ ಮತ್ತು ಅದರ ಪ್ರಮೋಟರ್‌ಗಳಿಂದ ವಿವಿಧ ಬ್ಯಾಂಕುಗಳಿಗೆ ಆಗಿರುವ 2,600 ಕೋಟಿ ರೂ.ಗಳಿಗೂ ಅಧಿಕ ವಂಚನೆಯ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿವೆ.

-ಉದಯವಾಣಿ

Comments are closed.