ರಾಷ್ಟ್ರೀಯ

ರೇಪ್‌ ಕೇಸು ಹಿಂಪಡೆಯಲು ಆರೋಪಿ ಬಿಜೆಪಿ ಶಾಸಕನ ಒತ್ತಡ ?

Pinterest LinkedIn Tumblr


ಹೊಸದಿಲ್ಲಿ: ರೇಪ್‌ ಆರೋಪಿಯಾಗಿರುವ ಉತ್ತರ ಪ್ರದೇಶ ಉನ್ನಾವೋ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೇಂಗಾರ್‌ ಮತ್ತು ರೇಪ್‌ ಸಂತ್ರಸ್ತೆಯ ಚಿಕ್ಕಪ್ಪನ ನಡುವೆ ನಡೆದದ್ದೆನ್ನಲಾದ ಫೋನ್‌ ಸಂಭಾಷಣೆಯು, ತನ್ನ ವಿರುದ್ದದ ರೇಪ್‌ ಕೇಸನ್ನು ಹಿಂಪಡೆಯುವಂತೆ ಆರೋಪಿ ಶಾಸಕ ಒತ್ತಡ ಹಾಕಿರುವುದನ್ನು ಬಹಿರಂಗಪಡಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರೆಕಾರ್ಡಿಂಗ್‌ ಮಾಡಲಾಗಿರುವ ಫೋನ್‌ ಕಾಲ್‌ ಸಂಭಾಷಣೆಯಲ್ಲಿ ಶಾಸಕ ಸೇಂಗಾರ್‌ ಅವರು “ಆದದ್ದಾಗಿ ಹೋಯಿತು. ನೀವು ನನ್ನ ಬಳಿ ಬನ್ನಿ. ನಾನು ಇನ್ಯಾರೂ ಅಲ್ಲ, ನಿಮಗೆ ಹತ್ತಿರದವನೇ ಆಗಿದ್ದೇನೆ; ನಾವು ಹೊಸ ಅಧ್ಯಾಯ ಆರಂಭಿಸೋಣ’ ಎಂದು ಹೇಳಿರುವುದು ಕೇಳಿ ಬರುತ್ತದೆ.

ಆದರೆ ಶಾಸಕ ಸೇಂಗಾರ್‌ ಅವರು “ನಾನು ಯಾವುದೇ ಫೋನ್‌ ಕರೆ ಮಾಡಿಲ್ಲ; ತನಿಖೆ ನಡೆಯಲಿ ; ಸತ್ಯ ಹೊರ ಬರುವ ತನಕ ಕಾಯಿರಿ. ಅದಕ್ಕೆ ಮೊದಲು ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಒಂದೊಮ್ಮೆ ನನ್ನ ವಿರುದ್ಧ ಆರೋಪ ಸಾಬೀತಾದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’ ಎಂದು ಮಾಧ್ಯಮಕ್ಕೆ ಹೇಳಿದರು.

-ಉದಯವಾಣಿ

Comments are closed.