ಮಥುರಾ: ಪಾಕಿಸ್ಥಾನ ಒಂದು ಅಲ್ಸರ್ ನ ಹಾಗೆ ಎಂದು ಹೇಳಿರುವ ಉತ್ತರ ಪ್ರದೇಶ ಸಚಿವ ಶ್ರೀಕಾಂತ ಶರ್ಮಾ ಅವರು, ಪಾಕ್ ಸೈನಿಕರು ನಮ್ಮ ಯೋಧರ ಮೇಲೆ ಗುಂಡೆಸೆದರೆ ಅವರ ಮೇಲೆ ನಾವು ಗುಂಡಿನ ಜಡಿಮಳೆಯನ್ನೇ ಸುರಿಸಬೇಕು ಎಂದು ಹೇಳಿದ್ದಾರೆ.
ಸಚಿವ ಶ್ರೀಕಾಂತ್ ಶರ್ಮಾ ಅವರು ಅಖೀಲ ಭಾರತ ವಾಣಿಜ್ಯ ಸಂಘಟನೆಯ ಶೃಂಗ ಸಭೆಯಲ್ಲಿ ಮಾತನಾಡುತ್ತಿದ್ದರು.
“ಪಾಕಿಸ್ಥಾನ ಒಂದು ನಸೂರ್ (ಅಲ್ಸರ್) ಇದ್ದ ಹಾಗೆ. ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದಾಗ ತಾಳ್ಮೆಯಿಂದ ಇರುವಂತೆ ನಮ್ಮ ಯೋಧರಿಗೆ ಸೂಚಿಸಲಾಗಿದೆ. ನಿಜಕ್ಕಾದರೆ ಪಾಕ್ ಸೈನಿಕರು ನಮ್ಮ ಮೇಲೆ ಗುಂಡೆಸೆದಾಗ ಅವರು ತಮ್ಮ ಬಂಕರ್‌ಗಳಿಗೆ ಮರಳುವ ತನಕವೂ ಅವರ ಮೇಲೆ ಗುಂಡಿನ ಜಡಿಮಳೆಯನ್ನು ಸುರಿಸಬೇಕು’ ಎಂದು ಸಚಿವ ಶರ್ಮಾ ಹೇಳಿದರು.
ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕಿಸ್ಥಾನಕ್ಕೆ ಗುಂಡಿನ ಮೂಲಕ ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಬೇಕು ಎಂದು ಶರ್ಮಾ ಹೇಳಿದರು.
-ಉದಯವಾಣಿ
Comments are closed.