ರಾಷ್ಟ್ರೀಯ

ಅತ್ಯಾಚಾರಿ ಬಾಬಾನಿಗೆ 25 ವರ್ಷ ಜೈಲು

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಡೋಂಗಿ ಬಾಬಾನೋರ್ವ ಮಹಿಳೆಯೋರ್ವರನ್ನು ಅತ್ಯಾಚಾರ ಮಾಡಿದ್ದು, ಮಥುರಾದ ನ್ಯಾಯಾಲಯ 25 ವರ್ಷಗಳ ಜೈಲು ವಾಸವನ್ನು ಪ್ರಕಟಿಸಿ ತೀರ್ಪು ನೀಡಿದೆ. ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಬಾಬಾ ದ್ವಾರಕದಾಸ್ ಎಂಬಾತನ ಚಿಕಿತ್ಸೆಗಾಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ. ಕಳೆದ ವರ್ಷ ತನ್ನ ಪತಿ ಮತ್ತು ಮಗಳೊಂದಿಗೆ ಬಾಬಾನ ಆಶ್ರಮಕ್ಕೆ ತೆರಳಿದ್ದಾಗ ಬಾಬಾ ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು, ಅಂತಹ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತೇನೆಂದು ಹೆಳಿ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. ತಾನು ಪ್ರತಿಭಟಿಸಿದಾಗ ಇದು ಚಿಕಿತ್ಸೆಯ ಒಂದು ಭಾಗವಾಗಿದ್ದು, ಈ ನಡೆಯದೇ ಇದ್ದಲ್ಲಿ ಕುಟುಂಬಕ್ಕೆ ತೊಂದರೆಯುಂಟಾಗುತ್ತದೆ ಎಂದು ಹೇಳಿ ಸುಮ್ಮನಾಗಿಸಿದ್ದಾನೆ ಎಂದು ತಿಳಿಸಿದ್ದಾಳೆ. ಆದರೆ ಆಕೆ ಅಲ್ಲಿ ನಡೆದ ವಿಚಾರವನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ ಮತ್ತು ಮಥುರಾ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಡೋಂಗಿ ಬಾಬಾನಿಗೆ ಮಥುರಾ ನ್ಯಾಯಾಲಯ 25 ವರ್ಷಗಳ ಬಂಧನ ಮತ್ತು 25,000 ರು. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 27 ತಿಂಗಳುಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

Comments are closed.