ರಾಷ್ಟ್ರೀಯ

ನೂರಾರು ಮಂಗಗಳ ಕೊಂದ ಚೀನಿ ಚಟ್ನಿ!

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನೂರಾರು ಮಂಗಗಳು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಅರಣ್ಯ ಮತ್ತು ಆರೋಗ್ಯ ಇಲಾಖೆ ಅಕಾರಿಗಳು ಆತಂಕಗೊಂಡಿದ್ದಾರೆ.

ಇಲ್ಲಿನ ದಾಬರ್ಸಿ ಗ್ರಾಮದಲ್ಲಿ ಸಂಭವಿಸಿದ ಕೋತಿಗಳ ಸಾವಿಗೆ ವಿಷಾಹಾರ ಸೇವನೆ ಕಾರಣ ಎನ್ನಲಾಗಿದೆ. ಚೀನಾದ ಜನಪ್ರಿಯ ಆಹಾರವಾದ ‘ಚೌಮೀನ್‌ ಚಟ್ನಿ(ನೂಡಲ್ಸ್‌ ಮತ್ತು ಸಾಸ್‌) ಸೇವಿಸಿ ಕೋತಿಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮತ್ತೊಂದೆಡೆ, ಕೋತಿಗಳು ಮತ್ತು ನಾಯಿಗಳಿಗೆ ವಿಚಿತ್ರ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಾಧ್ಯತೆ ಬಗ್ಗೆ ಆರೋಗ್ಯ ಇಲಾಖೆ ಅಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಎಚ್ಚರದಿಂದ ಇರುವಂತೆ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

ಕೋತಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಮೃತದೇಹಗಳನ್ನು ಬರೇಲಿಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಗ್ರಾಮಸ್ಥರಿಂದಲೇ ವಿಷ ಪ್ರಾಷನ?

ಈ ಮಧ್ಯೆ, ಕೋತಿಗಳ ಹಾವಳಿ ತಾಳಲಾರದೆ ಗ್ರಾಮಸ್ಥರೇ ವಿಷವಿಟ್ಟಿರುವ ಅನುಮಾನವೂ ಕಾಡುತ್ತಿದೆ. ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗಷ್ಟೇ ಮಂಗಗಳ ಚೇಷ್ಟೆಯಿಂದ ಬಾಲಕನೊಬ್ಬ ಮೃತಪಟ್ಟಿದ್ದ. ಕೋತಿಯೊಂದು ಇಟ್ಟಿಗೆ ತಲೆ ಮೇಲೆ ಬೀಳಿಸಿದ ಪರಿಣಾಮ, ತೀವ್ರವಾಗಿ ಗಾಯಗೊಂಡ ಬಾಲಕ ಕೊನೆಯುಸಿರೆಳೆದಿದ್ದ.

Comments are closed.