ರಾಷ್ಟ್ರೀಯ

ಐಸಿಐಸಿಐ ಬ್ಯಾಂಕಿಗೆ 58.90 ಕೋಟಿ ರೂ. ದಂಡ ಹೇರಿದ ಆರ್‌ಬಿಐ

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಐಸಿಐಸಿಐ ಬ್ಯಾಂಕಿಗೆ 58.89 ಕೋಟಿ ರೂ.ಗಳ ಭಾರೀ ದೊಡ್ಡ ಮೊತ್ತದ ದಂಡವನ್ನು ಹೇರಿದೆ.

ಎಚ್‌ಟಿಎಂ ಪೋರ್ಟ್‌ ಫೋಲಿಯೋ ಮೂಲಕ ಭದ್ರತಾ ಪತ್ರಗಳ ನೇರ ಮಾರಾಟಕ್ಕೆ ಸಂಬಂಧಿಸಿದಂತೆ ತಾನು ನೀಡಿದ ನಿರ್ದೇಶಗಳನ್ನು ಪಾಲಿಸದ ಮತ್ತು ಈ ವಿಷಯದಲ್ಲಿ ಸೂಚಿತ ಮಾಹಿತಿಗಳನ್ನು ಬಹಿರಂಗಪಡಿಸದ ಕಾರಣಕ್ಕೆ ಆರ್‌ಬಿಐ, ಐಸಿಐಸಿಐ ಬ್ಯಾಂಕ್‌ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದ ದಂಡ ಹೇರಿರವುದಾಗಿ ತಿಳಿದು ಬಂದಿದೆ.

ತನ್ನ ನಿರ್ದೇಶಗಳನ್ನು ಅನುಷ್ಠಾನಕ್ಕೆ ತರುವಲ್ಲಿನ ವೈಫ‌ಲ್ಯಕ್ಕಾಗಿ 58.90 ಕೋಟಿ ರೂ. ದಂಡವನ್ನು ತಾನು ಹೇರುತ್ತಿರುವುದಾಗಿ ಮಾರ್ಚ್‌ 26ರ ಆದೇಶದಲ್ಲಿ ಆರ್‌ಬಿಐ, ಐಸಿಐಸಿಐ ಬ್ಯಾಂಕಿಗೆ ತಿಳಿಸಿದೆ.

ಐಸಿಐಸಿಐ ಬ್ಯಾಂಕ್‌ ನಡೆಸಿರುವ ಯಾವುದೇ ವಹಿವಾಟಿನ ಸಿಂಧುತ್ವ ಪ್ರಶ್ನಿಸುವ ಅಥವಾ ಬ್ಯಾಂಕ್‌ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಪ್ರಶ್ನಿಸುವುದಾಗಲೀ ಈ ದಂಡ ಹೇರಿಕೆ ಕ್ರಮದ ಉದ್ದೇಶವಾಗಿರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಐಸಿಐಸಿಐ ಬ್ಯಾಂಕ್‌ ತಾನು ಪಾಲಿಸಬೇಕಾದ ನೀತಿ ನಿಯಮಗಳನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಈ ದಂಡ ಹೇರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ.

-ಉದಯವಾಣಿ

Comments are closed.