ರಾಷ್ಟ್ರೀಯ

ಈ ಬಾರಿಯ ಮನ್ ಕಿ ಬಾತ್’ನಲ್ಲಿ ಮೋದಿ ಏನು ಹೇಳಿದ್ರು ಗೊತ್ತೇ..?

Pinterest LinkedIn Tumblr

ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿಯವರು 42ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮಲ್ಲಿ ಮಾತನಾಡುತ್ತಿದ್ದು, ರಾಮನವಮಿ ಹಬ್ಬದ ಹಿನ್ನಲೆಯಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೂ ಸ್ಫೂರ್ತಿಯಾಗಿದೆ. ಜನವರಿ 26 ಗಣರಾಜ್ಯೋತ್ಸವ ದಿನದಂದು ಆಷಿಯಾನ್ ರಾಷ್ಟ್ರಗಳಿಂದ ಗಣ್ಯರು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಆ ರಾಷ್ಟ್ರಗಳ ಸಾಂಸ್ಕೃತಿಕ ತಂಡಗಳು ಪ್ರದರ್ಶಗಳನ್ನು ನೀಡಿದ್ದವು. ಇದರಲ್ಲಿ ಬಹುಪಾಲು ದೇಶಗಳು ನಮ್ಮ ಮುಂದೆ ರಾಮಾಯಣವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದರು ಎಂಬುದೇ ಅಪಾರ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ಜೀವನದಲ್ಲಿ ರಾಮನ ಶಕ್ತಿಯಿತ್ತು. ವಿಶ್ವ ನೋಡಿದ ರೀತಿಯಲ್ಲಿ ಭಾರತ ಬದಲಾಗಿದೆ. ಇದೀಗ ಭಾರತವನ್ನು ಇಡೀ ವಿಷ್ವ ಗೌರವದಿಂದ ನೋಡುತ್ತಿದೆ.ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೆ ಸ್ಪೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶದ ಜನತೆ ಬರೆದ ಪತ್ರಗಳನ್ನು ಮೋದಿಯವರು ಓದಿದ್ದಾರೆ. ಈ ವೇಳೆ ರೈತರ ಸಮಸ್ಯೆಗಳನ್ನು ಕುರಿತ ಪತ್ರವೊಂದನ್ನು ಓದಿದ ಮೋದಿಯವರು, ರೈತರ ಕಲ್ಯಾಣಕ್ಕಾಗಿ ದುಡಿದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ, ರಾಮ್ ಮನೋಹರ್ ಲೋಹಿಯಾ ಅವರ ಕೊಡುಗೆಗಳನ್ನು ಸ್ಮರಣಿಸಿದ್ದಾರೆ.

ರೈತರು ಮತ್ತು ಕೃಶಿ ಭಾರತದ ಆರ್ಥಿಕತೆಯ ದೊಡ್ಡ ಭಾಗವಾಗಿದೆ. ಎಂಎಸ್’ಪಿ ಕುರಿತಂತೆ ಸಾಕಷ್ಟು ರೈತರು ನನಗೆ ಪತ್ರಗಳನ್ನು ಬರೆದಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ 1.5 ರಷ್ಟು ಎಂಎಸ್’ಪಿ ನೀಡಲು ನಿರ್ಧರಿಸಿದ್ದೇನೆ. ಕಾರ್ಮಿಕರ ವೆಚ್ಚ, ಕೃಷಿಗೆ ಬಳಸಿದ ಹಣ ಹಾಗೂ ಭೂಮಿಯ ವೆಚ್ಚ ಎಲ್ಲವನ್ನೂ ಪರಿಗಣಿಸಿ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

ಹಳ್ಳಿಗಳಲ್ಲಿರುವ ಸಗಟು ಮಾರುಕಟ್ಟೆಗಳನ್ನು ಅಂತರಾಷ್ಟ್ರೀ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ. ಮೇಘಾಲಯದಲ್ಲಿರುವ ರೈತರು ದೇಶದ ವರ್ಚಸ್ಸನ್ನು ಬದಲಾಯಿಸಿದ್ದಾರೆ. ಆರೋಗ್ಯ ಸೇವೆಯ ಜೊತೆಗೆ ಉತ್ತಮ ಆರೋಗ್ಯ ಕಾಪಾಡುವತ್ತ ಗಮನಹರಿಸುತ್ತಿದ್ದೇವೆ. ರಾಷ್ಟ್ರೀಯ ಆರೋಗ್ಯ ಕೇಂದ್ರಗಳು ದೇಶದ ಪ್ರತೀ ಭಾಗ ತಲುಪುವಂತೆ ಮಾಡಲು ಕಾರ್ಯಗಳು ನಡೆಯುತ್ತಿವೆ. ಯೋಗ ಇದೀಗ ಸಾಮೂಹಿಕ ಚಳುವಳಿಯಾಗಿ ಮಾರ್ಪಟ್ಟಿದ್ದು, ಪ್ರತೀ ಮನೆಯನ್ನೂ ತಲುಪಿದೆ. ನಾನು ಯೋಗ ಶಿಕ್ಷಕನಲ್ಲ. ಆದರೆ, ಸೃಜನಶೀಲತೆ ಹೊಂದಿರುವ ಕೆಲವರು ನಾನು ಯೋಗ ಶಿಕ್ಷಕನಂತೆ ಮಾಡಿದ್ದಾರೆ.

ಏ.14 ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾಗಿದೆ. ಅಂಬೇಡ್ಕರ್ ಅವರಿಗೆ ಉದ್ಯಮಗಳು ಬಡವರಿಗೆ ಉದ್ಯೋಗ ಒದಗಿಸುವ ವಿಧಾನವಾಗಿತ್ತು. ಇಂದು ಮೇಕ್ ಇನ್ ಇಂಡಿಯಾದ ಯುಗದಲ್ಲಿ ಅಂಬೇಡ್ಕರ್ ಅವರ ದೃಷ್ಟಿ ನಮಗೆ ಸ್ಫೂರ್ತಿಯಾಗಿದೆ. ಇಂದು ಭಾರತ ಪ್ರಕಾಶಮಾನವಾದ ದೇಶವಾಗಿ ಹೊರಹೊಮ್ಮದ್ದು, ದೇಶದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ.

ಡಾ.ಅಂಬೇಡ್ಕರ್ ಅವರ ದೃಷ್ಟಿಕೋನವವನ್ನು ಆಧರಿಸಿ ನಾವು ಸ್ಮಾರ್ಟ್ ಸಿಟಿ ಕಾರ್ಯವನ್ನು ಆರಂಭಿಸಿದ್ದೇವೆ. ಅಂಬೇಡ್ಕರ್ ಅವರು ಸ್ವಯಂ ಅವಲಂಬನೆಯನ್ನು ದೃಢವಾಗಿ ನಂಬಿದ್ದರು. ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿ ದೇಶದ ಯುವಕರಿಗೆ ಹೊಸ ಹೊಸ ಅವಕಾಶಗಳನ್ನು ನೀಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹಲವು ಜನರು ಹಾಸ್ಯ ಮಾಡಿದ್ದರು. ಬಡವರಾಗಿದ್ದರಿಂದ ಅವರನ್ನು ನಿರುತ್ಸಾಹಗೊಳಿಸುವ ಪ್ರಯತ್ನಗಳನ್ನು ಮಾಡಿದ್ದರು. ಆದರೆ, ನವ ಭಾರತ ವಿಭಿನ್ನವಾಗಿದೆ. ಗ್ರಾಮ ಸ್ವರಾಜ್ ಅಭಿಯಾನ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಏ.14 ರಿಂದ ಮೇ. 5 ರವರೆಗೂ ಸ್ಮರಣಿಸುತ್ತದೆ. ಇದರ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಮೋದಿಯವರು ಹೇಳಿದ್ದಾರೆ.

Comments are closed.