ರಾಷ್ಟ್ರೀಯ

ಫೇಸ್‌ಬುಕ್‌ ಪೇಜ್‌ ಡಿಲೀಟ್‌ ಮಾಡಿದ ಮೊಝಿಲಾ, ಟೆಲ್ಸಾ, ಸ್ಪೇಸೆಕ್ಸ್‌

Pinterest LinkedIn Tumblr


ಹೊಸದಿಲ್ಲಿ: ಫೇಸ್‌ ಬುಕ್‌ ಬಳಕೆದಾರರ ಖಾಸಗಿ ಮಾಹಿತಿಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಕದಿಯಲಾಗುತ್ತಿದೆ ಎಂಬ ಆಘಾತಕಾರಿ ವಿಷಯ ಕಳೆದ ವಾರ ಬಹಿರಂಗವಾಗಿರುವುದನ್ನು ಅನಸರಿಸಿ ಮೊಝಿಲಾ, ಟೆಲ್ಸಾ, ಸ್ಪೇಸೆಕ್ಸ್‌ ಮತ್ತು ಇತರ ಅನೇಕ ಪ್ರಖ್ಯಾತ ಕಂಪೆನಿಗಳು ಈಗ ತಮ್ಮ ಫೇಸ್‌ ಬುಕ್‌ ಪೇಜ್‌ಗಳನ್ನು ಡಿಲೀಟ್‌ ಮಾಡಿರುವುದಾಗಿ ವರದಿಯಾಗಿದೆ.

ಫೇಸ್‌ ಬುಕ್‌ ಪೇಜ್‌ ಡಿಲೀಟ್‌ ಮಾಡಿರುವ ಈ ಕಂಪೆನಿಗಳ ಕ್ರಮವು ತಾತ್ಕಾಲಿಕವಾದುದೆಂದು ತಿಳಿಯಲಾಗಿದೆಯಾದರೂ ಫೇಸ್‌ ಬುಕ್‌ ಕಂಪೆನಿಗೆ ಈ ವಿದ್ಯಮಾನವು ತೀವ್ರ ತಲೆನೋವು ತಂದಿರುವುದಾಗಿ ವರದಿಯಾಗಿದೆ.

ನಾವು ಸದ್ಯಕ್ಕೆ ಫೇಸ್‌ ಬುಕ್‌ನಿಂದ ದೂರ ಸರಿಯಲು ನಿರ್ಧರಿಸಿದ್ದೇವೆ ಎಂದು ಮೊಝಿಲಾ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ. ಫೈರ್‌ಫಾಕ್ಸ್‌ ವೆಬ್‌ ಬ್ರೌಸರ್‌ ಸೃಷ್ಟಿಕರ್ತನಾಗಿರುವ ಮೊಝಿಲಾ “ಫೇಸ್‌ ಬುಕ್‌ನಿಂದ ಬ್ರೇಕ್‌ ಪಡೆಯುವುದು ಒತ್ತಡದ ತಡೆಯಾಗಿದೆ’ ಎಂದು ಹೇಳಿದೆ.

-ಉದಯವಾಣಿ

Comments are closed.