ರಾಷ್ಟ್ರೀಯ

ಇನ್ನು ಮುಂದೆ ಮನೆ ಬಾಗಿಲಿಗೆ ಡೀಸೆಲ್!

Pinterest LinkedIn Tumblr


ದೆಹಲಿ: ಉಪ್ಪಿನಿಂದ ಊಟದವರೆಗೆ ಎಲ್ಲವೂ ಮನೆ ಬಾಗಿಲಿಗೆ ಸರಬರಾಜಾಗುವುದು ಹೊಸ ಸುದ್ದಿಯೇನಲ್ಲ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಡೀಸೆಲ್. ಹೌದು! ಇನ್ನು ಮನೆ ಬಾಗಿಲಿಗೆ ಡೀಸೆಲ್ ಸರಬರಾಜು ಮಾಡಲು ದೇಶದ ಅತಿ ದೊಡ್ಡ ಇಂಧನ ಸರಬರಾಜು ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮುಂದಾಗಿದೆ. ಈಗಾಗಲೇ ಪುಣೆಯಲ್ಲಿ ಈ ಸೇವೆ ಆರಂಭವಾಗಿದ್ದು ಗ್ರಾಹಕರಿಗೆ ಡೀಸೆಲ್ ಪೂರೈಸಲಾಗುತ್ತಿದೆ.

ಈ ಸೇವೆಯಿಂದ ಗ್ರಾಹಕರಗೆ ತುಂಬಾ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಿಂದ ದೂರವಿರುವ ಪ್ರದೇಶಗಳ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಈ ಹಿಂದೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಸೇವೆಯನ್ನು ಆರಂಭಿಸುವ ಮುನ್ಸೂಚನೆ ನೀಡಿದ್ದರು. ಆಧುನಿಕ ತಂತ್ರಜ್ಞಾನವನ್ನು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಪ್ರಯತ್ನ ನಡೆಸಿರುವುದಾಗಿ ಅವರು ಹೇಳಿದ್ದರು.

ಕಳೆದ ವರ್ಷ ‘ಮೈ ಪೆಟ್ರೊಲ್ ಪಂಪ್‌‘ ಎಂಬ ಹೆಸರಿನಲ್ಲಿ ಎಎನ್‌ಬಿ ಫ್ಯೂಯಲ್ಸ್ ಕಂಪನಿಯು ಮನೆ ಬಾಗಿಲಿಗೆ ಪೆಟ್ರೋಲ್ ಒದಗಿಸುವ ಪ್ರಯತ್ನ ನಡೆಸಿತ್ತಾದರೂ ಸುರಕ್ಷತೆಯ ಕಾರಣಗಳಿಗಾಗಿ ನಾಲ್ಕೇ ದಿನಗಳಲ್ಲಿ ಸ್ಥಗಿತಗೊಳಿಸಿತ್ತು. ಇಂಡಿಯನ ಆಯಿಲ್ ಕಂಪನಿ ಯಾವ ರೀತಿ ಸೇವೆ ಒದಗಿಸುತ್ತದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಡೀಸೆಲ್‌ಗಿಂತ ಪೆಟ್ರೋಲ್ ಬೇಗ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುವುದರಿಂದ ಸಧ್ಯಕ್ಕೆ ಡೀಸೆಲ್ ಮಾತ್ರ ಪೂರೈಸಲು ಮನೆಯಲ್ಲೇ ಕುಳಿತು ಹಿಡಿಯಗಲದ ಮೊಬೈಲ್ ಮೂಲಕ ಊಟ, ತಿಂಡಿ, ಬಟ್ಟೆ, ಹೀಗೆ ಎಲ್ಲವನ್ನೂ ಮನೆ ಬಾಗಿಲಿಗೆ ತರಿಸಿಕೊಳ್ಳುವ ಗ್ರಾಹಕರು ತಮ್ಮ ವಾಹನಗಳಿಗೆ ಇಂಧನವನ್ನು ತುಂಬಿಸಲು ಬಂಕ್‌ಗಳಲ್ಲಿ ಸರತಿ ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಒಂದು ಮೆಸೇಜ್ ಮೂಲಕ ಮನೆ ಬಾಗಿಲಿಗೇ ಬಂಕ್ ಆಗಮಿಸಿ ನಿಮ್ಮ ವಾಹನಕ್ಕೆ ಇಂಧನವನ್ನು ತುಂಬಿಸುವ ಕಾಲ ತುಂಬಾ ದೂರವೇನಿಲ್ಲ. ಪುಣೆಯಲ್ಲಿ ಲಭ್ಯವಾಗುತ್ತಿರುವ ಸೇವೆ ಕೆಲವೇ ದಿನಗಳಲ್ಲಿ ರಾಜ್ಯಕ್ಕೂ ಕಾಲಿಡಲಿದೆ.

Comments are closed.