ರಾಷ್ಟ್ರೀಯ

ತಿರುಪತಿಯಲ್ಲಿ ಸಂಗ್ರಹವಾಗಿರುವ ಹಳೆ ನೋಟುಗಳ ಮೌಲ್ಯ ಕೇಳಿದ್ರೆ ನೀವು ಖಂಡಿತ ಶಾಕ್ಎ ಆಗ್ತೀರಿ…!

Pinterest LinkedIn Tumblr

ತಿರುಪತಿ: ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇಗುಲದಲ್ಲಿ ನಿಷೇಧಿತ ಹಳೆ ನೋಟುಗಳು ಸಂಗ್ರಹವಾಗಿದ್ದು, ಅವುಗಳ ಒಟ್ಟಾರೆ ಮೌಲ್ಯ ಸುಮಾರು 25 ಕೋಟಿ ರೂಪಾಯಿ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ನಿಷೇಧಗೊಂಡಿರುವ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ್ದಾರೆ. 2016ರ ನವೆಂಬರ್‌ 8 ರಂದು ನೋಟು ನಿಷೇಧಗೊಂಡ ಕೆಲವೇ ದಿನಗಳಲ್ಲಿ ಹುಂಡಿಯಲ್ಲಿ ಹಳೆ ನೋಟುಗಳು ಸಂಗ್ರಹವಾಗಿವೆ.

ಟಿಟಿಡಿ(ತಿರುಮಲ ತಿರುಪತಿ ದೇವಸ್ತಾನಂ) ಭಕ್ತರ ಅರ್ಪಣಾ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹಳೆ ನೋಟುಗಳ ಬದಲಾವಣೆಗಾಗಿ ಆರ್‌ಬಿಐಗೆ ಪತ್ರ ಬರೆಯಲಾಗಿದೆ ಎಂದು ಟಿಟಿಡಿಯ ಹೆಚ್ಚುವರಿ ಹಣಕಾಸು ಸಲಹೆಗಾರ ಒ ಬಾಲಾಜಿ ತಿಳಿಸಿದ್ದಾರೆ.

ಸದ್ಯಕ್ಕೆ ಆರ್‌ಬಿಐ ನಿಂದ ಉತ್ತರವನ್ನು ನಿರೀಕ್ಷಿಸುತ್ತಿದ್ದು, ಹಳೆ ನೋಟುಗಳು ದೇವಾಲಯದಲ್ಲಿಯೇ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದೆ ಎಂದು ಹೇಳಿದ್ದಾರೆ.

Comments are closed.