ರಾಷ್ಟ್ರೀಯ

ಕೇರಳ ಸಂಸದರ ಪತ್ನಿಗೆ ಲೈಂಗಿಕ ಕಿರುಕುಳ ! ವಿವಾದ ಹುಟ್ಟುಹಾಕಿದ ‘ಆತ್ಮಕಥೆ’

Pinterest LinkedIn Tumblr

ತಿರುವನಂತಪುರ: ಕೇರಳ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎ. ಮಣಿ ಅವರ ಸೊಸೆ ನಿಶಾ ಜೋಸ್ ತಾವು ಪ್ರಕಟಿಸಿದ ಆತ್ಮ ಕಥೆ ’ದಿ ಅದರ್ ಸೈಡ್ ಆಫ್ ದಿಸ್ ಲೈಫ್ – ಸ್ನಿಪ್ಪೆಲ್ಸ್ ಆಫ್ ಮೈ ಲೈಫ್ ಆಸ್ ಅ ಪೊಲಿಟಿಷಿಯನ್ಸ್ ವೈಫ್’ ಇದೀಗ ವಿವಾದಕ್ಕೆ ಕಾರನವಾಗಿದೆ.

ಪುಸ್ತಕದಲ್ಲಿ ಆಕೆ ತನಗೆ ಹಿಂದೊಮ್ಮೆ ರೈಲಿನಲ್ಲಿ ಲೈಂಗಿಕ ಕಿರುಕುಳ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಆಕೆ ತನಗೆ ಯಾರು ಕಿರುಕುಳ ನಿಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಪುಸ್ತಕದಲ್ಲಿ ಲೈಂಗಿಕ ಕಿರುಕುಳ ವಿಚಾರವನ್ನು ಬಹಿರಂಗವಾಗಿಹೇಳಿಕೊಂಡಿರುವ ಆಕೆಯ ಪುಸ್ತಕ ಇದೀಗ ವಿವಾದಕ್ಕೀಡಾಗಿದೆ.

ಸಂಸದ ಜೋಸ್‌ ಮಣಿ ಅವರ ಪತ್ನಿ ನಿಶಾ ಜೋಸ್ ತಾವು 2012ರಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸಮಯದಲ್ಲಿ ಕೇರಳದ ಇನ್ನೋರ್ವ ರಾಜಕಾರಣಿ ತನಗೆ ಲೈಂಗಿಕ ಕಿರುಕುಳ ನಿಡಿದ್ದ. ’ಲಕ್ಷ್ಮಣ ರೇಖೆ ದಾಟಿದ್ದ ಆತ ಅನೇಕ ಬಾರಿ ನನ್ನ ಕಾಲುಗಳನ್ನು ಆಕಸ್ಮಿಕವಾಗಿ ಸ್ಪರ್ಷಿಸಿದ್ದ’ ಎಂದು ಬರೆದಿದ್ದಾರೆ.

’ಈ ವಿಚಾರವನ್ನು ನಾನು ರೈಲ್ವೆ ಟಿಕೆಟ್ ಕಲೆಕ್ಟರ್ ಬಳಿ ಪ್ರಸ್ತಾಪಿಸಿದ್ದೆ. ಆದರೆ ಆತ ನನನ್ಗೆ ಸಹಾಯ ಮಾಡಲು ನಿರಾಕರಿಸಿದ. ’ನಾನೇನಾದರೂ ನಿಮಗೆ ಸಹಾಯ ಮ್ಡಿದರೆ ನಾನು ಕೆಲಸ ಕಳೆದುಕೊಲ್ಳಬೇಕಾಗುವುದು’ ಎಂದು ಆತ ಹೇಳಿದ್ದು ನೀವು ರಾಜಕೀಯದವರಾಗಿರುವ ಕಾರಣ ಸಮಸ್ಯೆಯನ್ನು ನೀವುಗಳೇ ಬಗೆಹರಿಸಿಕೊಳ್ಳಿ ಎಂದು ಸಲಹೆ ಮಾಡಿದ್ದ ;ಎಂದಿದ್ದಾರೆ.

2012ರಲ್ಲಿ ನಿಶಾ ಅವರು ಎಂಎಲ್‌ಎ ಪಿ ಸಿ ಜಾರ್ಜ್‌ ಅವರ ಪುತ್ರ ಶೋನ್‌ ಜಾರ್ಜ್‌ ಅವರೊಂದಿಗೆ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದರು. ಇದೀಗ ಬಿಡುಗಡೆಯಾದ ಆತ್ಮಕಥೆಯಲ್ಲಿ ತಾನು ರೈಲು ಪ್ರಯಾಣದಲ್ಲಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದು ಶೋನ್‌ ಜಾರ್ಜ್‌, ಆಕೆಗೆ ಕಿರುಕುಳ ನಿಡಿರಬೇಕೆಂದು ಸಂದೇಹ ವ್ಯಕ್ತವಾಗಿದೆ.

ಈ ನಡುವೆ “ಆಕೆಗೆ ಯಾರು ಲೈಂಗಿಕ ಕಿರುಕುಳ ನೀಡಿದ್ದರೆನ್ನುವುದನ್ನು ಸ್ಪಷ್ಟಪಡಿಸಲಿ, ಜನರು ಅನಗತ್ಯವಾಗಿ ನನ್ನ ಮೇಲೆ ಗುಮಾನಿ ಪಡುತ್ತಿದ್ದಾರೆ ಎಂದಿರುವ ಶೋನ್‌ ಜಾರ್ಜ್‌ ಈಸಂಬಂಧ ನಿಶಾ ವಿರುದ್ಧ ಪೋಲೀಸರಿಗೆ ದೂರಿತ್ತಿದ್ದಾರೆ.

ಪುಸ್ತಕ ಚೆನ್ನಾಗಿ ಮಾರಾಟವಾಗಲೆಂದು ಆಕೆ ಹೀಗೆಲ್ಲಾ ತಂತ್ರ ಉಪಯೋಗಿಸಿದ್ದಾರೆ ಎಂದೂ ಜಾರ್ಜ್ ಆರೋಪಿಸಿದರು.

Comments are closed.