ರಾಷ್ಟ್ರೀಯ

ನನ್ನ ಕೃತ್ಯದ ಬಗ್ಗೆ ವಿಷಾದವಿಲ್ಲ: ಬಿಯಾಂತ್‌ ಸಿಂಗ್‌ ಹತ್ಯೆಯ ರೂವಾರಿ

Pinterest LinkedIn Tumblr


ದೆಹಲಿ: ಪಂಜಾಬ್‌ ಮಾಜಿ ಮುಖ್ಯ ಮಂತ್ರಿ ಬಿಯಾಂತ್‌ ಸಿಂಗ್ ಹತ್ಯೆಯ ರೂವಾರಿ ಜಗ್ತರ್‌ ಸಿಂಗ್‌ ತರಾ ತಪ್ಪಿತಸ್ಥ ಎಂದು ಚಂಡೀಗಡದ ನ್ಯಾಯಾಲವೊಂದು ತೀರ್ಮಾನಿಸಿದೆ.

ಇದೇ ವೇಳೆ ಮಾತನಾಡಿದ ತರಾ ತನ್ನ ಕೃತ್ಯದ ಕುರಿತು ಯಾವುದೇ ವಿಷಾದವಿಲ್ಲ ಎಂದಿದ್ದು ದೇಶದಲ್ಲಿರುವ ಸಿಖ್ಖರ ಸ್ವಾತಂತ್ರ‍್ಯಕ್ಕೆ ಹೋರಾಡುವುದಾಗಿ ಹೇಳಿದ್ದಾನೆ.

“ಒಬ್ಬ ಕ್ರೂರ ವ್ಯಕ್ತಿಯನ್ನು ಕೊಲ್ಲುವ ಮೂಲಕ ಸಾವಿರಾರು ಅಮಾಯಕರ ಜೀವಗಳನ್ನು ಉಳಿಸುವುದು ತಪ್ಪಲ್ಲ” ಎಂದು ತರಾ ತನ್ನ ವಕೀಲ ಸಿಮ್ರನ್‌ಜಿತ್‌ ಸಿಂಗ್‌ ಮೂಲಕ ತಿಳಿಸಿದ್ದಾನೆ. ಇದೇ ವೇಳೆ ಖಾಲಿಸ್ತಾನ ಸ್ವಾತಂತ್ರ‍್ಯದ ದನಿ ಕೇಳಿ ಬರುತ್ತಿತ್ತು.

ಆಗಸ್ಟ್‌ 31, 1995ರಲ್ಲಿ ಬಿಯಾಂತ್‌ ಸಿಂಗ್‌ರನ್ನು ಕೊಲ್ಲಲಾಗಿತ್ತು. ಚಂಡೀಗಡದ ವಿಧಾನ ಭವನದ ಆವರಣದಲ್ಲಿ ಆತ್ಮಹತ್ಯಾ ದಾಳಿ ಮೂಲಕ ಬಿಯಾಂತ್‌ ಹತ್ಯೆಯಾಗಿತ್ತು. ಘಟನೆಯಲ್ಲಿ ಪಂಜಾಬ್‌ ಪೊಲೀಸ್‌ ದಿಲವರ್‌ ಸಿಂಗ್‌ ಮಾನವ ಬಾಂಬ್‌ ಆಗಿ ಕೆಲಸ ಮಾಡಿದ್ದ.

ಹತ್ಯೆಯಲ್ಲಿ ತನ್ನ ಪಾತ್ರದ ಕುರಿತು ಬಹಿರಂಗವಾಗಿ ಹೇಳಿಕೊಂಡಿರುವ ತರಾ ಸರಕಾರದ ವಿರುದ್ಧ ತನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾನೆ.

Comments are closed.