ರಾಷ್ಟ್ರೀಯ

ಮುಸ್ಲಿಮನಾಗಿಯೂ ನಾನು ರಾಮಭಕ್ತ: ಫಾರೂಕ್‌ ಅಬ್ದುಲ್ಲ

Pinterest LinkedIn Tumblr


ಹೊಸದಿಲ್ಲಿ : ನಾನು ಮುಸ್ಲಿಮನಾಗಿಯೂ ರಾಮಭಕ್ತ; ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ದೇಶದ ಅಭಿವೃದ್ಧಿ ಸಾಧಿಸಲು ಮಹಿಳೆಯರಿಗೂ ಅಧಿಕಾರ ಕೊಡಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲ ಹೇಳಿದ್ದಾರೆ.

ಪಾಕಿಸ್ಥಾನ ಮತ್ತು ರಾಷ್ಟ್ರೀಯವಾದ ವಿರೋಧಿಗಳು ಭಾರತಕ್ಕೆ ಬೆದರಿಕೆಗಳಾಗಿವೆ; ಆದರೆ ಎಲ್ಲಕ್ಕಿಂತ ದೊಡ್ಡದ್ದು ಆಂತರಿಕ ಬೆದರಿಕೆ. ಅಮೆರಿಕ, ಚೀನ, ರಶ್ಯ ಮುಂತಾಗಿ ಯಾವುದೇ ದೇಶವಿರಲಿ – ಅವು ಮೊತ್ತ ಮೊದಲಾಗಿ ನಿಭಾಯಿಸಬೇಕಾದದ್ದು ಆಂತರಿಕ ಬೆದರಿಕೆಯನ್ನು ಎಂದು ಅಬ್ದುಲ್ಲ ಹೇಳಿದರು.

ಝೀ ಇಂಡಿಯಾ ಶೃಂಗದಲ್ಲಿ ಮಾತನಾಡುತ್ತಿದ್ದ ಅವರು “ನಮಗೆ ಶಾಂತಿ ಬೇಕು, ಕೇವಲ ನಮ್ಮ ಕಾಶ್ಮೀರದಲ್ಲಿ ಮಾತ್ರವಲ್ಲ; ಇಡಿಯ ದೇಶದ ಮೂಲೆ ಮೂಲೆಗಳಲ್ಲೂ ಶಾಂತಿ ನೆಲೆಸಿರುವುದು ಅಗತ್ಯ’ ಎಂದರು.

ಕಾಶ್ಮೀರೀ ಪಂಡಿತರನ್ನು ನಾವು ಪುನಃ ರಾಜ್ಯಕ್ಕೆ ಕರೆ ತರುತ್ತೇವೆ; ಜಾತಿ, ಮತ, ಧರ್ಮ, ವರ್ಣದ ಆಧಾರದಲ್ಲಿ ನಾವು ಪ್ರತ್ಯೇಕತೆಗಳನ್ನು ರೂಪಿಸಿಕೊಂಡಿದ್ದೇವೆ; ಈ ಮನೋಭಾವ ತೊಲಗಬೇಕು. ನಾನು ಮುಸ್ಲಿಮನಾಗಿಯೂ ಶ್ರೀರಾಮನೊಂದಿಗೆ ಬೆಸೆದುಕೊಂಡಿದ್ದೇನೆ ಎಂದರು.

ಯಾವುದೇ ಪೂರ್ವಗ್ರಹವಿಲ್ಲದೆ ದೇಶದಲ್ಲಿ ಮುಸ್ಲಿಮರ ಸಶಕ್ತೀಕರಣ ಆಗಬೇಕು ಎಂದು ಕೇಂದ್ರ ಸಚಿವ ಮುಖ್‌ತಾರ್‌ ಅಬ್ಟಾಸ್‌ ನಕ್ವಿ ಹೇಳಿದರು.

ಝೀ ಇಂಡಿಯಾ ಶೃಂಗದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್‌ ಶಾ, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌, ಕೇಂದ್ರ ಸಚಿವ ಮುಖ್‌ತಾರ್‌ ಅಬ್ಟಾಸ್‌ ನಕ್ವಿ, ಅಸಾದುದ್ದೀನ್‌ ಓವೈಸಿ ಮುಂತಾಗಿ ವಿವಿಧ ಸ್ತರಗಳ ಗಣ್ಯರು ನಾಯಕರು ಭಾಗವಹಿಸುತ್ತಿದ್ದಾರೆ.

ಹಿಂದೂ ಓಟ್‌ ಬ್ಯಾಂಕ್‌ ಎನ್ನುವುದು ಒಂದು ಮಿಥ್ಯೆ, ಹಿಂದು ಓಟ್‌ ಬ್ಯಾಂಕ್‌ ಎನ್ನುವುದು ಸತ್ಯ ಎಂದು ಓವೈಸಿ ಕಟಕಿಯಾಡಿದರು.

-ಉದಯವಾಣಿ

Comments are closed.