ಕರ್ನಾಟಕ

ತಂದೆಯಂತೆ ರೈತರ ದನಿಯಾಗುವೆ: ದರ್ಶನ್‌ ಪುಟ್ಟಣ್ಣಯ್ಯ

Pinterest LinkedIn Tumblr


ರೈತ ಹೋರಾಟಗಾರ ಕೆ.ಎಸ್‌.ಪುಟ್ಟಣ್ಣಯ್ಯ ನಿಧನರಾದ ಬಳಿಕ, ಅವರ ಉತ್ತರಾಧಿಕಾರಿಯಾಗಿ ಪುತ್ರ ದರ್ಶನ್‌ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮುಂದಿನ ನಡೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

* ಚಳವಳಿ, ರಾಜಕೀಯ ನಿಮಗೆ ಹೊಸದು. ಹೇಗೆ ನಿಭಾಯಿಸಲು ಸಿದ್ಧರಾಗುತ್ತಿದ್ದೀರಿ?
ಚಳವಳಿಗೆ ಯುವಕರನ್ನು ಸಂಘಟಿಸಲು ಮೊದಲು ಆದ್ಯತೆ ನೀಡುವೆ. ಹಲವು ಸಂಘಟನೆ ಗಳೊಂದಿಗೆ ಕೈಜೋಡಿಸಿ ಹೋರಾಟದಲ್ಲಿ ಮುನ್ನಡೆಯಲು ಅಸಕ್ತನಾಗಿದ್ದೇನೆ.

* ಉದ್ಯಮ, ಹೋರಾಟ, ರಾಜಕೀಯದಲ್ಲಿ ತೊಡಗಲು ಹಿಂಸೆಯಾಗುವುದಿಲ್ಲವೇ?
ನನಗೆ ನನ್ನದೇ ಆದ ವ್ಯವಹಾರಗಳಿವೆ ನಿಜ. ಈಗಲೇ ಇದೆಲ್ಲವನ್ನು ನಿಭಾಯಿಸುವ ಹೊಣೆ ಗಾರಿಕೆ ನನ್ನ ಹೆಗಲಿಗೆ ಬಿದ್ದಿದೆ. ಐದಾರು ವರ್ಷ ಬಿಟ್ಟು ರೈತ ಚಳವಳಿಯಲ್ಲಿ ಸಂಪೂರ್ಣ ತೊಡಗಿಸಿ ಕೊಳ್ಳಬೇಕು ಎಂದು ಕೊಂಡಿದ್ದೆ. ಈಗ ಎಲ್ಲವೂ ಅನಿ ವಾರ್ಯವಾ ಗಿದೆ. ನನ್ನ ವ್ಯವಹಾರಗಳನ್ನು ನೋಡಿ ಕೊಳ್ಳಲು ಪಾಲು ದಾರರಿದ್ದಾರೆ. ಅದಕ್ಕಾಗಿ ಮ್ಯಾನೇಜ್‌ಮೆಂಟ್‌ ಟೀಮ್‌ ಸೆಟ್‌ ಮಾಡಿದ್ದೇನೆ. ಹಾಗಾಗಿ ಚಳವಳಿ, ರಾಜಕೀಯ ದಲ್ಲಿ ತೊಡಗುವುದಕ್ಕೆ ಅಡ್ಡಿಯಾಗುವುದಿಲ್ಲ.

* ರೈತರ ಸಮಸ್ಯೆಗಳು ನಿಮ್ಮ ಅರಿವಿಗೆ ಬಂದಿವೆಯೇ?
ರೈತರ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೇನೆ. ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಳ್ಳುತ್ತಿರುವೆ. ಈಗ ಬೇಸಿಗೆ ಬೆಳೆಗೆ ನೀರಿನ ಸಮಸ್ಯೆ ಎದುರಾಗಿದೆ. ರೈತರು ಸಾಲದ ಸುಳಿಯಲ್ಲಿದ್ದಾರೆ. ಬ್ಯಾಂಕ್‌ನಲ್ಲಿರುವ ಚಿನ್ನ ಹರಾಜಿಗೆ ಬರುತ್ತಿದೆ.

* ಕ್ಷೇತ್ರದಲ್ಲಿ ಯಾವ ರೀತಿ ವಾತಾವರಣವಿದೆ?
ಮೇಲುಕೋಟೆ ಕ್ಷೇತ್ರದಲ್ಲಿ ರಾಜಕೀಯವಾಗಿ ನಮಗೆ ಒಳ್ಳೆಯ ವಾತಾವರಣವಿದೆ. ಆದರೂ, ಅತಿಯಾದ ಆತ್ಮವಿಶ್ವಾಸ ಹೊಂದದೆ ಚುನಾವಣೆಯನ್ನು ಬಹಳ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಎದುರಿಸಲು ಸಿದ್ಧನಾಗುತ್ತಿದ್ದೇನೆ.

* ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಿತ್ತಲ್ಲ, ಸ್ವರಾಜ್‌ ಇಂಡಿಯಾ ಆಯ್ಕೆ ಮಾಡಿದ್ದೇಕೆ?
ಸ್ವರಾಜ್‌ ಇಂಡಿಯಾ ನನ್ನ ಮೊದಲ ಆಯ್ಕೆ. ಇದು ನನ್ನ ತಂದೆಯವರ ಆಸೆಯೂ ಆಗಿತ್ತು. ರೈತಸಂಘ, ರೈತ ಚಳವಳಿ ಉಳಿಯಬೇಕು. ಅದು ಯಶಸ್ವಿಯಾಗಿ ಮುನ್ನಡೆಯಬೇಕು ಎನ್ನುವುದು ಅವರ ಆಶಯವಾಗಿತ್ತು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದರೆ ಅದು ಸಾಧ್ಯವಾಗುವುದಿಲ್ಲ.

* ಮಾನಸಿಕವಾಗಿ ತುಂಬಾ ಒತ್ತಡವಿದೆಯೇ?
ಒತ್ತಡ ಇಲ್ಲದೇ ಇರುತ್ತಾ? ನಾವು ಎಷ್ಟೇ ಒತ್ತಡದಲ್ಲಿದ್ದರೂ ಜನರ ಪ್ರೀತಿ-ವಿಶ್ವಾಸ ಅದೆಲ್ಲವನ್ನೂ ಕಡಿಮೆ ಮಾಡಿ ಬಿಡುತ್ತದೆ.

ಸಂದರ್ಶನ: ಮಂಡ್ಯ ಮಂಜುನಾಥ್‌

-ಉದಯವಾಣಿ

Comments are closed.