ರಾಷ್ಟ್ರೀಯ

ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದ ಜೆಟ್ ಏರ್ವೇಸ್

Pinterest LinkedIn Tumblr

ದಿಲ್ಲಿ : ಜೆಟ್ ಏರ್ವೇಸ್ ತನ್ನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಿದೆ. ತನ್ನ ಟಿಕೆಟ್ ದರಗಳ ಮೇಲೆ ಆಫರ್ ನೀಡಿರುವ ಜೆಟ್ ಏರ್ವೇಸ್ ಕೆಲವೊಂದು ರೂಟ್’ಗಳಿಗೆ 1,170 ರು. ಆರಂಭಿಕ ದರವನ್ನು ನಿಗದಿ ಮಾಡಿದೆ. ಈ ಬಗ್ಗೆ ಇದರ ವೆಬ್ ಸೈಟ್’ನಲ್ಲಿ ಮಾಹಿತಿಯನ್ನು ನೀಡಿದೆ.

ಮಾರ್ಚ್ 25ರಿಂದ ಹೊಸ ಆಫರ್ ಮೂಲಕ ಪ್ರಯಾಣ ಮಾಡಬಹುದಾಗಿದೆ. ದೇಶದ ವಿವಿಧ ಪ್ರದೇಶಗಳಿಗೆ ವಿಶಾಲವಾದ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಈ ಹೊಸ ಆಫರ್ ನೀಡಲಾಗಿದೆ ಎಂದು ಜೆಟ್ ಏರ್ವೇಸ್ ಸಂಸ್ಥೆಯು ಹೇಳಿದೆ.

ಈ ಹೊಸ ಆಫರ್’ನಲ್ಲಿ ಆರಂಭಿಕ ಬೆಲೆಯು 1170 ರು. ಆಗಿದೆ. ಈ ದರದಲ್ಲಿ ಬಾಗ್ದೋಗ್ರಾದಿಂದ – ಗುವಾಹಟಿಗೆ ಪ್ರಯಾಣ ಮಾಡಬಹುದಾಗಿದೆ. ಅತ್ಯಂತ ಹೆಚ್ಚಿನ ಪ್ರಮಾಣದ ಡಿಸ್ಕೌಂಟ್ ಕೂಡ ದೊರೆಯುತ್ತಿದೆ.

ಇನ್ನು ಇಂಪಾಲದಿಂದ – ಗುವಾಹಟಿಗೆ ಪ್ರಯಾಣಿಸಲು 1700 ರು. ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಇಂದೋರ್’ಗೆ ಪ್ರಯಾಣ ಮಾಡಲು 2601 ರು. ನಿಗದಿ ಮಾಡಲಾಗಿದೆ.

ಈ ಹೊಸ ಆಫರ್’ನಲ್ಲಿ ಯಾವುದೇ ರೀತಿಯಾದ ರಿಸ್ಟ್ರಿಕ್’ಶನ್’ಗಳನ್ನೂ ಹೇರಲಾಗಿಲ್ಲ. ಸೆಲೆಕ್ಟೆಡ್ ಬುಕಿಂಗ್ ಕ್ಲಾಸ್’ಗಳಿಗೆ ಹೊಸ ಆಫರ್ ಅನ್ವಯವಾಗುತ್ತದೆ. ಟಿಕೆಟ್’ ವ್ಯಾಲಿಡಿಟಿ 12 ತಿಂಗಳಿನದ್ದಾಗಿರುತ್ತದೆ.

Comments are closed.