ರಾಷ್ಟ್ರೀಯ

ಜೋಧ್‌ಪುರ ಹೋಟೆಲ್‌ ಬಾತ್‌ ಟಬ್‌ನಲ್ಲಿ ಬಿದ್ದ ಹಿಲರಿ ಕ್ಲಿಂಟನ್‌: ಮೂಳೆ ಮೂರಿತ

Pinterest LinkedIn Tumblr


ಹೊಸದಿಲ್ಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌ ಕೈ ಮುರಿತಕ್ಕೊಳಗಾಗಿದ್ದಾರೆ.

ಜೋಧ್‌ಪುರದ ಐಷಾರಾಮಿ ಹೋಟೆಲ್‌ನ ಕೊಠಡಿಯ ಬಾತ್‌ಟಬ್‌ನಲ್ಲಿ ಬಿದ್ದು ಕೈ ಮುರಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಮೂಳೆ ಮುರಿತಕ್ಕೊಳಗಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜಸ್ಥಾನದ ಪಾರಂಪರಿಕ ಹೋಟೆಲ್‌ಗಳಲ್ಲಿ ಒಂದಾದ ಉಮ್ಮೀದ್‌ ಭವನದಲ್ಲಿ ಹಿಲರಿ ಕ್ಲಿಂಟನ್‌ ವಾಸ್ತವ್ಯ ಹೂಡಿದ್ದರು.

70 ವರ್ಷದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಸದ್ಯ ಇಲ್ಲಿನ ಗೋಯಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಾಟ್‌ ಹ್ಯಾಪನ್ಡ್‌ ಎಂಬ ತಮ್ಮ ಪುಸ್ತಕದ ಪ್ರಚಾರಕ್ಕಾಗಿ ಹಿಲರಿ ಕ್ಲಿಂಟನ್‌ ಭಾರತಕ್ಕೆ ಆಗಮಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಹಿಲರಿ ಕ್ಲಿಂಟನ್‌ ಲಂಡನ್‌ನಲ್ಲಿ ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರು.

Comments are closed.