ರಾಷ್ಟ್ರೀಯ

ಬಂಗಾಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಹ್ಲಿ ಕುರಿತು ಪ್ರಶ್ನೆ

Pinterest LinkedIn Tumblr


ಕೋಲ್ಕತಾ: ಕೋಲ್ಕತಾದಲ್ಲಿ 10ನೇ ತರಗತಿಯ ಇಂಗ್ಲಿಷ್‌ ಪರೀಕ್ಷೆ ಬರೆಯಲು ಕುಳಿತ ವಿದ್ಯಾರ್ಥಿಗಳಿಗೆ ಅಚ್ಚರಿಯೊಂದು ಕಾದಿತ್ತು. ಅವರು ತಮ್ಮ ನೆಚ್ಚಿನ ಹೀರೋ ಕುರಿತಾದ ಪ್ರಶ್ನೆಯೊಂದನ್ನು ಕಂಡು ಆನಂದವನ್ನೂ ಅನುಭವಿಸಿದರು. ಅಂದಹಾಗೆ ಆ ಪ್ರಶ್ನೆ ಯಾರ ಬಗ್ಗೆ ಬಂದಿತ್ತು ಗೊತ್ತೇ? ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕುರಿತು! ಭಾರತ ತಂಡದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಜೀವನದ ಬಗ್ಗೆ ಚುಟುಕಾಗಿ
ಬರೆಯಿರಿ ಎಂದು 10 ಅಂಕಗಳ ಪ್ರಶ್ನೆಯೊಂದನ್ನು ನೀಡಲಾಗಿತ್ತು.

ವಿದ್ಯಾರ್ಥಿಗಳೆಲ್ಲ ಇದಕ್ಕೆ ಪೂರ್ತಿ ಅಂಕ ಪಡೆಯುವುದರಲ್ಲಿ ಅನುಮಾನವಿಲ್ಲ! ಕೊಹ್ಲಿ ಕುರಿತ ಪ್ರಶ್ನೆಯನ್ನು 10ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಅಳವಡಿಸಿದ್ದಕ್ಕೆ ಬಂಗಾಳದ ಮಾಜಿ ಕ್ರಿಕೆಟಿಗ, ಈಗ ತೃಣಮೂಲ ಕಾಂಗ್ರೆಸ್‌ ಪಕ್ಷದ ಲೋಕಸಭಾ ಸದಸ್ಯರೂ ಆಗಿರುವ ಲಕ್ಷ್ಮೀರತನ್‌ ಶುಕ್ಲ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಶಂಸಾರ್ಹ ಹೆಜ್ಜೆ ಎಂದಿದ್ದಾರೆ.

-ಉದಯವಾಣಿ

Comments are closed.