ರಾಷ್ಟ್ರೀಯ

ಕೇರಳ ದೇವಾಲಯದಲ್ಲಿ ಯಜ್ಞಕ್ಕೆ ಮನುಷ್ಯರ ರಕ್ತ ಅರ್ಪಣೆ

Pinterest LinkedIn Tumblr


ತಿರುವನಂತಪುರ: ‘ದೇವಿಯೊಡೆ ಶ್ರೀ ವಿದ್ವಾರಿ ವೈದ್ಯನಾಥನ್’ ದೇವಾಲಯದಲ್ಲಿ ದೇವತೆಗೆ ಮನುಷ್ಯರ ರಕ್ತ ನೀಡಿ ಪೂಜೆ ಮಾಡುವ ಪದ್ಧತಿಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಈ ಪದ್ಧತಿ ನಿಲ್ಲಿಸುವ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಇದರಿಂದ ದೇವಾಲಯದ ಆಡಳಿತ ಮಂಡಳಿ ದೇವತೆಯನ್ನು ಸಂತೋಷಗೊಳಿಸಲು ಮಾಡುತ್ತಿದ್ದ ಈ ಪೂಜಾ ಪದ್ಧತಿಯನ್ನು ಕೈ ಬಿಡಲು ನಿರ್ಧರಿಸಿದೆ.

ಮಾರ್ಚ್ 12ರಂದು ನಡೆಯುವ ‘ಕಾಳಿಯೂಟು ಹಬ್ಬ’ 10 ದಿನಗಳವರೆಗೆ ನಡೆಯಲಿದ್ದು, ಈ ಹಬ್ಬದಲ್ಲಿ ಭಕ್ತರು ಸಿರಿಂಜ್ಗಳ ಮೂಲಕ ರಕ್ತ ತೆಗೆದು ದೇವಿಯ ಪೂಜೆಗೆ ಅರ್ಪಿಸುತ್ತಿದ್ದರು.

‘ದೇವಾಲಯದ ಆಡಳಿತ ಮಂಡಳಿಗೆ ಸರಕಾರದ ನಿರ್ಧಾರದ ವಿರುದ್ಧ ಹೋಗುವ ಯಾವುದೇ ಇಚ್ಛೆಯಿಲ್ಲ. ಒಂದು ಸಂಪ್ರದಾಯವನ್ನು ಸರಕಾರವು ಕೆಟ್ಟ ರೀತಿಯಲ್ಲಿ ಬಿಂಬಿಸಿರುವುದಕ್ಕೆ ಬೇಸರವಾಗಿದೆ’ ಎಂತಾರೆ ಈ ದೇವಾಲಯದ ತಂತ್ರಿ (ಪ್ರಧಾನ ಅರ್ಚಕ) ಎ ಮಣಿಕಂಠನ್.

‘ಮನುಷ್ಯರ ರಕ್ತ ಅರ್ಪಿಸಿ ಮಾಡುವ ‘ಮಹಾಘೋರ ಕಾಳಿ ಯಜ್ಞ’ ದಿಂದ ಹಲವು ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ’ ಎಂಬುದಾಗಿ ಈ ಯಜ್ಞದ ಮಹತ್ವದ ಬಗ್ಗೆ ತಂತ್ರಿ ಹೇಳುತ್ತಾರೆ.

‘ಯಜ್ಞದ ಬಗ್ಗೆ ಮಾತನಾಡುತ್ತಾ ‘ಇದೊಂದು ಪುರಾತನ ಪದ್ಧತಿಯಾಗಿದೆ. ಸರಕಾರ ಹಾಗೂ ಸಾರ್ವಜನಿಕರು ಇದರ ಬಗ್ಗೆ ತಪ್ಪಾದ ಮಾಹಿತಿ ನೀಡುತ್ತಿದ್ದಾರೆ. ಈ ಯಜ್ಞದ ಹಿಂದೆ ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ. ಭಕ್ತರೇ ಯಜ್ಞಕ್ಕಾಗಿ ರಕ್ತವನ್ನು ಸಂಗ್ರಹಿಸಲು ಕೋರಿದ್ದರು. ಯಜ್ಞದ ಬೆಂಕಿ ತುಂಬಾ ಪವಿತ್ರವಾದದು, ಅದಕ್ಕೆ ರಕ್ತವನ್ನು ಹಾಕಿದರೆ ಅದು ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದಲೇ ಹಿಂದೂ ಪುರಾಣದಲ್ಲಿ ಈ ರೀತಿಯ ಪದ್ಧತಿ ಬಗ್ಗೆ ಹಲವಾರು ಉಲ್ಲೇಖಗಳಿವೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ವಿವರಿಸಬೇಕು, ಸರಕಾರ ಇದರ ಬಗ್ಗೆ ವೈಜ್ಞಾನಿಕ ವಿವರಣೆ ಕೇಳಬಹುದಿತ್ತು’ಎಂದು ಹೇಳಿದ್ದಾರೆ.

ಇಲ್ಲಿ ರಕ್ತ ಪರೀಕ್ಷೆಗೆ ನೀಡುವುದಕ್ಕಿಂತ ಕಡಿಮೆ ರಕ್ತವನ್ನು ಸಂಗ್ರಹಿಸುತ್ತೇವೆ. ನಾವು ರಕ್ತಕೊಡಿ ಅಥವಾ ಪೂಜೆಯಲ್ಲಿ ಭಾಗವಹಿಸಿ ಅಂತ ಯಾರನ್ನೂ ಒತ್ತಾಯಿಸುವುದಿಲ್ಲ. ಆದರೆ ಸರಕಾರದ ಈ ನಿರ್ಧಾರದಿಂದಾಗಿ ಈ ಯಜ್ಞ ನಡೆಸಲು ಸರಕಾರದ ಅನುಮತಿ ಪಡೆಯಲು ಭಕ್ತರಲ್ಲಿ ಹೇಳಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Comments are closed.