ರಾಷ್ಟ್ರೀಯ

ಕಳಪೆ ಆಹಾರ ಪೂರೈಕ: ಯೋಧನ ವೀಡಿಯೋ ವೈರಲ್‌

Pinterest LinkedIn Tumblr


ಹೊಸದಿಲ್ಲಿ: ಕಳಪೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಬಿಎಸ್‌ಎಫ್‌ ಯೋಧ ತೇಜ್‌ ಬಹದ್ದೂರ್‌ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಮತ್ತೊರ್ವ ಯೋಧ ಇದೇ ಮಾದರಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ವೀಡಿಯೋ ಕೂಡಾ ವೈರಲ್‌ ಆಗಿದೆ.

ಬಿಎಸ್​ಎಫ್ ಕ್ಯಾಂಪ್​ನಲ್ಲಿ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಆರೋಪ ಮಾಡಿದ್ದ ಬಿಎಸ್​ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅಲ್ಲದೇ ಇದರ ಜತೆಯಲ್ಲಿಯೇ ಬಿಎಸ್‌ಎಫ್‌ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡುವುದಾಗಿ ಭರವಸೆ ಕೂಡಾ ನೀಡಿತ್ತು.

ಆದರೆ ಇದೀಗ ತೇಕನ್‌ಪುರ್‌ ಬಿಎಸ್‌ಎಫ್‌ ಕ್ಯಾಂಪ್‌ನಿಂದ ಯೋಧನೊಬ್ಬ ವೀಡಿಯೋ ಅಪ್ಲೋಡ್‌ ಮಾಡಿದ್ದು ಇಲ್ಲಿ ಪೂರೈಸುತ್ತಿರುವ ಆಹಾರ ತಿನ್ನಲು ಅಸಾಧ್ಯ, ಕಳೆದ 18 ವರ್ಷದಿಂದ ಸೇವೆ ಮಾಡುತ್ತಲೇ ಬಂದಿದ್ದೇನೆ. ಇಂತಹ ಆಹಾರ ಸೇವನೆ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಯಾವ ಮಟ್ಟದಲ್ಲಿ ಪರಿಣಾಮ ಬೀರಬಹುದು ಎಂಬುದು ಸಹ ಅಧಿಕಾರಿಗಳಿಗೆ ತಿಳಿಯುತ್ತಿಲ್ಲ ಎಂದು ಯೊಧ ಕಿಡಿಕಾರಿದ್ದಾರೆ.

Comments are closed.