ರಾಷ್ಟ್ರೀಯ

ಕೇಂದ್ರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಲು ಟಿಡಿಪಿ ಮುಂದಾಗಿರುವ ಬೆನ್ನಲ್ಲೇ ಬಿಜೆಪಿ ಸಚಿವರಿಂದ ರಾಜಿನಾಮೆಗೆ ನಿರ್ಧಾರ

Pinterest LinkedIn Tumblr

ಅಮರಾವತಿ: ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುಲ ಟಿಡಿಪಿ ಮುಂದಾಗಿರುವ ಬೆನ್ನಲ್ಲೇ, ಇದೀಗ ಆಂಧ್ರ ಪ್ರದೇಶ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲು ಆಂಧ್ರ ಪ್ರದೇಶ ಬಿಜೆಪಿ ಘಟಕ ಮುಂದಾಗಿದೆ.

ಪ್ರಸ್ತುತ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಜು ಅವರ ಕ್ಯಾಬಿನೆಟ್ ನಲ್ಲಿರುವ ಕಮಿನೇನಿ ಶ್ರೀನಿವಾಸ್ ಮತ್ತು ಪೈಡಿಕೊಂಜಲ ಮಾಣಿಕ್ಯಾಲಾರಾವ್ ಅವರು ತಮ್ಮ ಸಚಿನ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಬಿಜೆಪಿ ವಕ್ತಾರ ಅಕುಲಾ ಸತ್ಯನಾರಾಯಣ ರಾವ್ ಅವರು ಮಾಹಿತಿ ನೀಡಿದ್ದಾರೆ. ಅಂತೆಯೇ ರಾಜಿನಾಮೆ ನೀಡುತ್ತಿರುವ ಹಿನ್ನಲೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಗೂ ಬಿಜೆಪಿ ಸಚಿವರು ಗೈರು ಹಾಜರಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಾಯ್ಡು ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ನಿನ್ನೆ ಹೇಳಿಕ ನೀಡಿದ್ದ ಬಿಜೆಪಿ ಮುಖಂಡ ಕೃಷ್ಣ ಸಾಗರ್ ರಾವ್ ಅವರು, ನಾಯ್ಜು ಓರ್ವ ಅವಕಾಶವಾದಿ ರಾಜಕಾರಣೆ ಎಂದು ಟೀಕಿಸಿದ್ದರು.

ನಿನ್ನೆಯಷ್ಟೇ ಟಿಡಿಪಿ ಕೇಂದ್ರ ಸಚಿವರಾದ ಅಶೋಕ್ ಗಜಪತಿ ರಾಜು ಮತ್ತು ವೈಎಸ್ ಚೌದರಿ ಅವರು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡುವಂತೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಜು ಅವರು ಸೂಚಿಸಿದ್ದರು.

Comments are closed.